ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪರ್ಸೋನಾ ಮಿಸಸ್ ಇಂಡಿಯಾ 2022 ಪಟ್ಟ ಮುಡಿಗೇರಿಸಿಕೊಂಡ ಬೆಂಗಳೂರಿನ ಹೇಮಾ ನಿರಂಜನ್
ಈ ಸ್ಪರ್ಧೆಯಲ್ಲಿ ಗೆಲ್ಲಲು ಬರೀ ಬ್ಯೂಟಿ ಒಂದೇ ಮಾನದಂಡವಲ್ಲ. ತುಂಡು ಬಟ್ಟೆಗಳನ್ನು ಧರಿಸುವುದೂ ಅಲ್ಲ. ಸಾಕಷ್ಟು ಪೂರ್ವ ತಯಾರಿ ಬೇಕು. ಅಷ್ಟೇ ಅಲ್ಲದೇ ಕೆಲವು ಸುತ್ತುಗಳ ಪರೀಕ್ಷೆ ಸಹ ಇಲ್ಲಿರುತ್ತದೆ. ತುಂಡು ಉಡುಗೆ ಧರಿಸುವ ಸ್ಪರ್ಧೆಗಳಲ್ಲಿ ಭಾಗವಹಿಸಲು ನಾನು ಇಷ್ಟಪಡುವುದಿಲ್ಲ. ನಾನು ಈ ಸ್ಪರ್ಧೆಯಲ್ಲಿ ಭಾಗವಹಿಸಲು ವ್ಯಾಯಾಮ ಮಾಡಿ ಆರು ಕೆಜಿ ತೂಕ ಇಳಿಸಿಕೊಂಡಿದ್ದೀನಿ. 33 ಜನ ಸ್ಪರ್ಧಿಗಳು ಭಾಗವಹಿಸಿದ್ದ ಪರ್ಸೋನಾ mrs ಇಂಡಿಯಾ 2022 ಸ್ಪರ್ಧೆಯಲ್ಲಿ ನಾನು ವಿಜೇತಳಾಗಿದ್ದು ಸಂತೋಷವಾಗಿದೆ.
ಉದ್ಯಮಿಯಾಗೂ ನಾನು ಕಾರ್ಯ ನಿರ್ವಹಿಸುತ್ತಿದ್ದೇನೆ. ಒಳ್ಳೆಯ ಅವಕಾಶ ಸಿಕ್ಕರೆ ಸಿನಿಮಾದಲ್ಲಿ ನಟಿಸುತ್ತೇನೆ. ನನ್ನ ಇಷ್ಟದ ಹೀರೋ ಕಿಚ್ಚ ಸುದೀಪ್. ಅವರೊಡನೆ ಅಭಿನಯಿಸುವ ಆಸೆ ಇದೆ ಎಂದರು ಹೇಮಾ ನಿರಂಜನ್.
