ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಜಲ್ಸಾ ಸಿನಿಮಾದ ಸಂಭ್ರಮಾಚರಣೆ ವೇಳೆ ಪವನ್ ಕಲ್ಯಾಣ್ ಅಭಿಮಾನಿಗಳಿಂದ ಥಿಯೇಟರ್ ಧ್ವಂಸ
2008ರಲ್ಲಿ ತೆರೆಗೆ ಬಂದ ತ್ರಿವಿಕ್ರಮ್ ನಿರ್ದೇಶನದ ಪವನ್ ಕಲ್ಯಾಣ್ ಹಾಗೂ ಇಲಿಯಾನ ನಟನೆಯ ಜಲ್ಸಾ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದ ಸಿನಿಮಾವನ್ನು ಪವನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮರು ಬಿಡುಗಡೆ ಮಾಡಲಾಗಿತ್ತು.
ಪವನ್ ಬರ್ತಡೇ ಹಿನ್ನೆಲೆಯಲ್ಲಿ 501 ಚಿತ್ರಮಂದಿರಗಳಲ್ಲಿ ಜಲ್ಸಾ ಪ್ರದರ್ಶನ ನಡೆಯಬೇಕಿತ್ತು. ಆದರೆ ಕೆಲವು ಥಿಯೇಟರ್‌ಗಳಲ್ಲಿ ಅಶಿಸ್ತಿನ ವರ್ತನೆ ಮತ್ತು ವಿಧ್ವಂಸಕ ಕೃತ್ಯದ ಬಳಿಕ, ಕೆಲವರು ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಿದ್ದರು. ಇದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು. ಜಲ್ಸಾ ಚಿತ್ರದ ವಿಶೇಷ ಪ್ರದರ್ಶನದಿಂದ ಬಂದ ಹಣವನ್ನು ಪವನ್ ಕಲ್ಯಾಣ್ ರಾಜಕೀಯ ಯೋಜನೆಗಳು ಹಾಗೂ ಆಂಧ್ರಪ್ರದೇಶದಲ್ಲಿ ಸಂಕಷ್ಟದಲ್ಲಿರುವ ರೈತರನ್ನು ಬೆಂಬಲಿಸುವ ಉದ್ದೇಶವನ್ನು ಹೊಂದಿತ್ತು.
ಆದರೆ ಜಲ್ಸಾ ಸಿನಿಮಾ ನಿಲ್ಲಿಸಿದ್ದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಥಿಯೇಟರ್ ಗೆ ಬೆಂಕಿ ಹಚ್ಚಿ ವಿಕೃತಿ ಮರೆದಿದ್ದಾರೆ. ವೈಜಾಗ್‌ನ ಲೀಲಾ ಮಹಲ್ ಥಿಯೇಟರ್‌ನಲ್ಲಿ ಬಹುತೇಕ ಎಲ್ಲಾ ಆಸನಗಳನ್ನು ಹರಿದುಹಾಕಲಾಗಿದೆ. ಸ್ಕ್ರೀನಿಂಗ್ ನಡೆಯುತ್ತಿದ್ದರೂ ಸಭಾಂಗಣದೊಳಗೆ ಅಭಿಮಾನಿಗಳು ಪಟಾಕಿಯಂತಹ ವಸ್ತುಗಳನ್ನು ಬಳಸಿ ನೃತ್ಯ ಮಾಡಿದ್ದಾರೆ.
ಅಲ್ಲದೆ ಕರ್ನೂಲ್ ಥಿಯೇಟರ್ ಅನ್ನು ಅಭಿಮಾನಿಗಳು ಧ್ವಂಸಗೊಳಿಸಿದ್ದಾರೆ. ಮೊದಲು ಸ್ಕ್ರೀನಿಂಗ್‌ನ ಗುಣಮಟ್ಟದಿಂದ ಅಸಮಾಧಾನಗೊಂಡ ಅಭಿಮಾನಿಗಳು ನಂತರ ಚಿತ್ರ ಪ್ರದರ್ಶನವನ್ನು ನಿಲ್ಲಿಸಿದ ನಂತರ ಮತ್ತಷ್ಟು ಅಸಮಾಧಾನಗೊಂಡಿದ್ದರು.
Kurnool cult's on fire 🔥
— Nizam PawanKalyan FC™ (@NizamPKFC) September 1, 2022
Orey ila unnaru entra rey 🔥🥵#Jalsa4KCelebrations @PawanKalyan pic.twitter.com/fxyQ9YygTc
