ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪವಿತ್ರಾ ಲೋಕೇಶ್ ನನ್ನ ಪತ್ನಿ ಅನ್ನೋದಕ್ಕೆ ಸಾಕಷ್ಟು ಪರಾವೆಗಳಿವೆ : ನಟ ಸುಚೇಂದ್ರ ಪ್ರಸಾದ್
ನಾನು ಹಿಂದೂ ವಿವಾಹದ ಸಂಪ್ರದಾಯದಂತೆ ಪವಿತ್ರಾ ಲೋಕೇಶ್ ಅವರನ್ನು ಮದುವೆ ಆಗಿದ್ದೇನೆ. ನಾನೇ ಪವಿತ್ರಾ ಲೋಕೇಶ್ ಅವರ ಗಂಡ ಎನ್ನುವುದಕ್ಕೆ ಅವರ ಪಾಸ್ ಪೋರ್ಟ್ ಹಾಗೂ ಆಧಾರ್ ಕಾರ್ಡ್ ಗಮನಿಸಿದರೆ ಗೊತ್ತಾಗುತ್ತದೆ. ನನ್ನ ಪಾಸ್ ಪೋರ್ಟ್ ನಲ್ಲೂ ಅವರೇ ಹೆಂಡತಿ ಅಂತಿದೆ. ಅಲ್ಲದೇ, ನಾವಿಬ್ಬರೂ ಗಂಡ ಹೆಂಡತಿ ಅನ್ನುವ ಕಾರಣಕ್ಕಾಗಿಯೇ ಹಲವಾರು ಧಾರ್ಮಿಕ ಗುರುಗಳು ನಮ್ಮನ್ನು ಸನ್ಮಾನಿಸಿದ್ದು, ಸಾಕಷ್ಟು ಕಾರ್ಯಕ್ರಮಗಳಿಗೆ ಗಂಡ ಹೆಂಡತಿಯಾಗಿ ಹೋಗಿದ್ದೇವೆ. ಆದರೆ ನಮ್ಮ ಮದುವೆಯ ನೊಂದಣಿ ಮಾತ್ರ ಮಾಡಿಸಿಲ್ಲ ಎಂದಿದ್ದಾರೆ.
ಮದುವೆ ನೋಂದಣಿ ಪತ್ರ ವಿದೇಶಿ ಸಂಸ್ಕೃತಿಯಾಗಿದ್ದು, ಭಾರತದಲ್ಲಿ ಕಡ್ಡಾಯವಲ್ಲ ಎನ್ನುವ ಕಾರಣಕ್ಕೆ ಸಮ್ಮನಿದ್ದೆ ಎಂದು ಸುಚೇಂದ್ರ ಪ್ರಸಾದ್ ಹೇಳಿದ್ದಾರೆ.
