• January 1, 2026

ತೆರೆ ಹಿಂದೆ ಲವ್ವಿ ಡವ್ವಿ, ತೆರೆ ಮುಂದೆ ಅಣ್ಣ- ತಂಗಿ: ಇದು ನರೇಶ್, ಪವಿತ್ರಾ ಲವ್ ಕಹಾನಿ

ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಈಗಾಗ್ಲೆ ಮೂರು ಮದುವೆಯಾಗಿರೋ ನರೇಶ್ ಪವಿತ್ರ ಲೋಕೇಶ್ ರನ್ನ ನಾಲ್ಕನೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತ ಪವಿತ್ರಾ ಲೋಕೇಶ್ ಕೂಡ ಸುಚೇಂದ್ರ ಪ್ರಸಾದ್ ಹಾಗೂ ಇಬ್ಬರು ಮಕ್ಕಳನ್ನು  ಬಿಟ್ಟು ನರೇಶ್ ಜೊತೆ ಜೋಡಿಯಾಗೋಕೆ ರೆಡಿಯಾಗಿದ್ದಾರೆ. ಆದರೆ ಇಷ್ಟು ದಿನ ಜೋಡಿಗಳಾಗಿದ್ದವರು ಇದೀಗ ಅಣ್ಣ ತಂಗಿಯಾಗಿ ಬಿಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ನರೇಶ್ ಹಾಗೂ ಪವಿತ್ರಾ ಸುದ್ದಿ ಮತ್ತೆ ಸದ್ದು ಮಾಡುತ್ತಿದ್ದೆ. ಇದಕ್ಕೆ ಕಾರಣ ರವಿತೇಜಾ ನಟನೆಯ  `ರಾಮ್‌ರಾವ್ ಆನ್‌ಡ್ಯೂಟಿ’ ಚಿತ್ರ. ನಿನ್ನೇಯಷ್ಟೇ ಈ ಸಿನಿಮಾ ತೆರೆ ಕಂಡಿದ್ದು ಚಿತ್ರದಲ್ಲಿ ನರೇಶ್ ಹಾಗೂ ಪವಿತ್ರಾ ಅಣ್ಣ ತಂಗಿಯಾಗಿ ಕಾಣಿಸಿಕೊಂಡಿದ್ದಾರೆ. ರಿಯಲ್ ಲೈಫ್ ನಲ್ಲಿ ಮೂರು ನಾಲ್ಕು ಮದುವೆಯಾಗಿರೋ ಈ ಜೋಡಿಗಳು ರಿಯಲ್ ಲೈಫ್ ನಲ್ಲಿ ಒಡಹುಟ್ಟಿದವರಾಗಿ ಕಾಣಿಸಿಕೊಂಡಿದ್ದು, ಎಲ್ಲಿಂದ ಎಲ್ಲಿಗೆ ಸಂಬಂಧ ನೋಡಿ ಅಂತ್ತಿದ್ದಾರೆ ಸಿನಿಮಾ ನೋಡಿದವರು. ಈಗಾಗ್ಲೆ ಮೂರು ಮದುವೆಯಾಗಿ ಮೂರನೇ ಹೆಂಡತಿಯಿಂದ ವಿಚ್ಚೇದನ ಪಡೆಯದೆ ನರೇಶ್ ಪವಿತ್ರಾ ಜೊತೆ ಮದುವೆಯಾಗೋಕೆ ರೆಡಿಯಾಗಿದ್ದಾರೆ. ಈ ಜೋಡಿಗಳು ರೆಡ್ ಹ್ಯಾಂಡ್ ಆಗಿ ಕ್ಯಾಮಾರಾಗೆ ಸಿಕ್ಕಿ ಬಿದ್ದು ದೊಡ್ಡ ಮಟ್ಟದಲ್ಲಿ ರಂಪ ರಾಮಾಯಾಣವಾಗಿದೆ. ಇದೀಗ ಈ ಜೋಡಿಗಳು ಸಿನಿಮಾದಲ್ಲಿ ಅಣ್ಣ ತಂಗಿಯಾರಾಗಿ ಕಾಣಿಸಿಕೊಂಡಿರೋದು ನೋಡಿ ಪ್ರೇಕ್ಷಕರು ಬಿದ್ದು ಬಿದ್ದು ನಕ್ಕಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now