ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪೆಳ್ಳಿ ಚೂಪುಲು ನಿರ್ದೇಶಕ ತರುಣ್ ಭಾಸ್ಕರ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾಗೆ ಅದ್ದೂರಿ ಚಾಲನೆ
ವಿಜಿ ಸೈನ್ಮಾ ಬ್ಯಾನರ್ನಲ್ಲಿ ಪ್ರೊಡಕ್ಷನ್ ಅಡಿಯಲ್ಲಿ ಪ್ರೊಡಕ್ಷನ್ ನಿರ್ಮಾಣವಾಗಲಿರುವ ಈ ಚಿತ್ರದ ಮುಹೂರ್ತ ಅದ್ಧೂರಿಯಾಗಿ ಹೈದ್ರಾಬಾದ್ ನಲ್ಲಿ ನೆರವೇರಿದೆ. ನಿರ್ಮಾಪಕ ಸುರೇಶ್ ಬಾಬು, ನಾಯಕರಾದ ಸಿದ್ಧಾರ್ಥ್, ತೇಜ ಸಜ್ಜ, ನಂದು ಸೇರಿದಂತೆ ಹಲವು ಯುವ ನಿರ್ದೇಶಕರು ಈ ಕಾರ್ಯಕ್ರಮಕ್ಕೆ ಭಾಗಿಯಾಗಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಶ್ರೀಪಾದ್ ನಂದಿರಾಜ್, ಸಾಯಿಕೃಷ್ಣ ಗದ್ವಾಲ್, ಉಪೇಂದ್ರ ವರ್ಮಾ, ವಿವೇಕ್ ಸುಧಾಂಶು ಮತ್ತು ಕೌಶಿಕ್ ನಂದೂರಿ ಈ ಚಿತ್ರ ನಿರ್ಮಾಣ ಮಾಡಲಿದ್ದು, ಶೀರ್ಘದಲ್ಲಿ ಸ್ಟಾರ್ ಕಾಸ್ಟ್, ತಾಂತ್ರಿಕ ವರ್ಗ ಫೈನಲ್ ಆಗ್ತಿದ್ದಂತೆ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಧುಮುಕಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ 2023 ರಲ್ಲಿ ಪ್ಯಾನ್ ಇಂಡಿಯಾ ಕೀಡಾ ಕೋಲಾ ತೆರೆಗೆ ಬರಲಿದೆ.
