ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಅಪ್ಪು ಕುರಿತು ಅವಹೇಳನಕಾರಿಯಾಗಿ ಮಾತನಾಡಿ ಕೊನೆಗೆ ಕೈ ಮುಗಿದು ಕ್ಷಮೆ ಯಾಚಿಸಿದ ಕಿಡಿಗೇಡಿ
ಲಿಂಗದೇವರು ಕೊಪ್ಪಲಿನಲ್ಲಿರುವುದು ಪುಟ್ಟ ಎಂಬ ವ್ಯಕ್ತಿ ಪುನೀತ್ ರಾಜ್ ಕುಮಾರ್ ಅವರಿಗೆ ಅವಮಾನ ಮಾಡಿದ್ದ. ವಿಡಿಯೋ ನೋಡಿ ಗರಂ ಆದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು.
ಪುಟ್ಟನ ಮನೆಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲದೆ ಆತನ ಮನೆ ಮುಂದೆ ಧರಣಿ ನಡೆಸಿ ಆತನ ವಿರುದ್ಧ ಕಾನೂನುಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ.
ನಗರದ ಹೊರಹೊಲಯದ ಬೆಳವಾಡಿ ಗ್ರಾಮದ ಹೆದ್ದಾರಿಯಲ್ಲಿ ಪುನೀತ್ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದು, ಅವಹೇಳನಕಾರಿಯಾಗಿ ಮಾತನಾಡಿದವನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ರಸ್ತೆ ತಡೆ ಕೂಡ ನಡೆಸಿದ್ದು, ಪುನೀತ್ ಫೋಟೋ ರಸ್ತೆ ಮಧ್ಯೆ ಇರಿಸಿ ಪ್ರತಿಭಟನೆ ನಡೆಸಿದರು.
ಇದರಿಂದ ಭಯಗೊಂಡ ವ್ಯಕ್ತಿ ಬಳಿಕ ಎಲ್ಲರ ಎದುರು ಕೈ ಮುಗಿದು ಕ್ಷಮೆ ಯಾಚಿಸಿದ್ದಾನೆ. ಘಟನೆಯಿಂದ ತನ್ನ ತಂದೆ ತಾಯಿ ಸಾಕಷ್ಟು ಭಯಗೊಂಡಿದ್ದಾರೆ. ಮುಂದೆಂದೂ ಯಾವ ನಟನ ಕುರಿತಾಗಿಯೂ ಈ ರೀತಿ ಮಾತನಾಡುವುದಿಲ್ಲ. ಇದೊಂದು ಬಾರಿ ಕ್ಷಮಿಸಿ ಎಂದು ಬೇಡಿಕೊಂಡಿದ್ದಾನೆ.
