ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ವೈರಲ್ ಆದ ನಗ್ನ ಫೋಟೋ ನನ್ನದಲ್ಲ: ಶಾಕಿಂಗ್ ಹೇಳಿಕೆ ನೀಡಿದ ನಟ ರಣವೀರ್ ಸಿಂಗ್
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಪ್ರತಿಯೊಂದು ಫೋಟೋಗಳನ್ನು ಪೊಲೀಸರು ರಣವೀರ್ ಸಿಂಗ್ ಗೆ ತೋರಿಸಿದ್ದಾರೆ. ಈ ವೇಳೆ ವೈರಲ್ ಆದ ಒಂದು ಫೋಟೋ ತಮ್ಮದಲ್ಲ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಗುಪ್ತಾಂಗ ಕಾಣುವ ರೀತಿಯಲ್ಲಿ ಇರುವ ಬೇರೆ ಯಾರದ್ದೋ ಫೋಟೋಗೆ ತಮ್ಮ ಮುಖವನ್ನು ಜೋಡಿಸಲಾಗಿದೆ ಅಂತ ರಣವೀರ್ ಹೇಳಿದ್ದಾರೆ.
ಪೇಪರ್ ಮ್ಯಾಗಝೀನ್ ಗಾಗಿ ಬೆತ್ತಲಾದ ನಟ ರಣವೀರ್ ಸಿಂಗ್ ಅವುಗಳ ಫೋಟೋವನ್ನು ಜುಲೈ 22ರಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅವು ಕ್ಷಣಾರ್ಧದಲ್ಲಿ ವೈರಲ್ ಆಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಸಾಕಷ್ಟು ಮಂದಿ ರಣವೀರ್ ಪರವಾಗಿ ನಿಂತರೆ ಮತ್ತೊಂದಷ್ಟು ಮಂದಿ ರಣವೀರ್ ನಡೆಯನ್ನು ವಿರೋಧಿಸಿದ್ದರು. ಅಲ್ಲದೆ ಸಾಕಷ್ಟು ಕಡೆಗಳಲ್ಲಿ ರಣವೀರ್ ಫೋಟೋ ಶೂಟ್ ಕುರಿತು ಎಫ್ ಐ ಆರ್ ಕೂಡ ದಾಖಲಾಗಿತ್ತು.
