• June 19, 2026

14 ವರ್ಷದವನಿರುವಾಗಲೆ 55 ವರ್ಷದ ಮಹಿಳೆಯ ಜೊತೆ ಸೆಕ್ಸ್: ವಿವಾದ ಹುಟ್ಟುಹಾಕಿದ ಹಿರಿಯ ನಟ ಓಂ ಪುರಿ ಲೈಫ್

ನಟ ಓಂಪುರಿ ಬಾಲಿವುಡ್ ಜೊತೆ ಇಂಗ್ಲಿಷ್ ಸಿನಿಮಾ ರಂಗದಲ್ಲೂ ಖ್ಯಾತಿ ಘಳಿಸಿದ್ದಾರೆ. ತಮ್ಮ ಅದ್ಬುತ ನಟನೆಯ ಮೂಲಕ ಖ್ಯಾತಿ ಘಳಿಸಿರುವ ಓಂಪುರಿ ಫರ್ಸನಲ್ ಲೈಫ್ ಕೂಡ ಅಷ್ಟೇ ಸದ್ದು ಮಾಡಿತ್ತು. ಇದೀಗ ಓಂಪುರಿ ಸೆಕ್ಸ್ ಲೈಫ್ ಕುರಿತಾಗಿ ಓಂಪುರಿ ಪತ್ನಿ ಬರೆದುಕೊಂಡಿದ್ದಾರೆ. ಈ ಸುದ್ದಿ ವಿವಾದ ಹುಟ್ಟಿಹಾಕಿದೆ. ಬಾಲಿವುಡ್‌ ಜೊತೆಗೆ ಹಾಲಿವುಡ್‌ ಸಿನಿಮಾ ರಂಗದಲ್ಲೂ ಸದ್ದು ಮಾಡಿದ್ದರು. ಮರಾಠಿ ಸಿನಿಮಾದ ಮೂಲಕ ಸಿನಿ ಜರ್ನಿ ಆರಂಭಿಸಿದ ಓಂಪುರಿ ಕನ್ನಡ ಸಿನಿಮಾದಲ್ಲೂ ನಟಿಸಿದ್ದರು. ಸಿನಿ ಬದುಕಿನ ಯಶಸ್ಸಿನ ಜೊತೆಜೊತೆಗೇ ಸಾಕಷ್ಟು ವಿವಾದಗಳಲ್ಲಿ ಸಿಲುಕಿಕೊಂಡಿದ್ದರು. 14 ವರ್ಷದವರಿದ್ದಾಗ್ಲೇ ಓಂಪುರಿ 55 ವರ್ಷದ ಮನೆಗೆಲಸದವಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು ಅನ್ನೋ ವಿಚಾರ ವಿವಾದ ಸೃಷ್ಟಿಸಿತ್ತು. ಓಂ ಪುರಿ ಅವರ ಮಾಜಿ ಪತ್ನಿ ನಂದಿತಾ ಪುರಿ ಈ ಬಗ್ಗೆ ಅವರ ಜೀವನ ಚರಿತ್ರೆ ಅನ್‌ಲೈಕ್ಲಿ ಹೀರೋ: ದಿ ಸ್ಟೋರಿ ಆಫ್ ಓಂ ಪುರಿ ಪುಸ್ತಕದಲ್ಲಿ ಬರೆದಿದ್ದಾರೆ. ಈ ವಿಚಾರ ಸಾಕಷ್ಟು ಅಚ್ಚರಿ ಹಾಗೂ ಆಘಾತಕ್ಕೆ ಕಾರಣವಾಗಿತ್ತು. ಓಂಪುರಿ ಲಕ್ಷ್ಮಿ ಎಂಬ ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಬಗ್ಗೆ ಪುಸ್ತಕದಲ್ಲಿ ವಿವರಗಳಿವೆ. 2013 ರಲ್ಲಿ ಪತ್ನಿ ನಂದಿತಾ ಪುರಿ, ಓಂಪುರಿ ವಿರುದ್ಧ ದೂರು ದಾಖಲಿಸಿದ್ದರು. ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆಂದು ದೂರು ನೀಡಿದ್ದು ಘಟನೆಯ ಬಳಿಕ ದಂಪತಿ ವಿಚ್ಛೇದನ ಪಡೆದರು. ಓಂಪುರಿ ಹಾಗೂ ನಂದಿತ 26 ವರ್ಷ ಒಟ್ಟಿಗೆ ಸಂಸಾರ ನಡೆಸಿದ್ದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now