• February 10, 2026

ವಿಮಾನದೊಳಗೆ ಸಿಗರೇಟ್ ಸೇದುತ್ತಾ ವಿಡಿಯೋ ಮಾಡಿದ ವ್ಯಕ್ತಿ: ಸಿಂಧಿಯಾಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

ನವದೆಹಲಿ: ವಿಮಾನದಲ್ಲಿ ಪ್ರಯಾಣಿಸ ಬೇಕು ಅಂದ್ರೆ ಕೆಲವೊಂದು ರೂಲ್ಸ್ ಗಳಿರುತ್ತವೆ. ಅದನ್ನು ಪ್ರಯಾಣಿಕರು ಚಾಚು ತಪ್ಪದೆ ಪಾಲಿಸಬೇಕಾಗುತ್ತದೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ರೂಲ್ಸ್ ಬ್ರೇಕ್ ಮಾಡಿದ ಕಾರಣಕ್ಕೆ ಇದೀಗ ತೊಂದರೆಗೆ ಸಿಲುಕಿದ್ದಾನೆ.   ಸ್ಪೈಸ್ಜೆಟ್ ವಿಮಾನದೊಳಗೆ ವ್ಯಕ್ತಿಯೋರ್ವ ಸಿಗರೇಟ್ ಸೇದಿರುವ ವೀಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಟ್ಯಾಗ್ ಮಾಡಿ ಟೀಕೆ ವ್ಯಕ್ತಪಡಿಸಿದ್ದಾರೆ, ಸದ್ಯ ಜ್ಯೋತಿರಾದಿತ್ಯ ಸಿಂಧಿಯಾ ಪ್ರತಿಕ್ರಿಯಿಸಿದ್ದು ಸಿಗರೇ           ಟು ಸೇದಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಗುಗಾರ್ಂವ್ ನಿವಾಸಿ ಬಾಬಿ ಕಟಾರಿಯಾ ವಿಮಾನದ ಸೀಟಿನ ಮೇಲೆ ಶೂಧರಿಸಿ ಮಲಗಿಕೊಂಡು, ಲೈಟರ್‌ನಲ್ಲಿ ಸಿಗರೇಟ್ ಹೊತ್ತಿಸಿಕೊಂಡು, ನಿಟ್ಟುಸಿರು ಬಿಡುತ್ತಾ ಸಿಗರೇಟ್ ಸೇದುತ್ತಿರುವುದನ್ನು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.  ಮೂಲಗಳ ಪ್ರಕಾರ ಈ ವೀಡಿಯೋ 2022 ಜನವರಿ 23ರದ್ದಾಗಿದೆ. ಕಳೆದೆರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಬಾಬಿ ಕಟಾರಿಯಾ ಸ್ಪೈಸ್ ಜೆಟ್ ವಿಮಾನದಲ್ಲಿ ದುಬೈನಿಂದ ದೆಹಲಿಗೆ ಪ್ರಯಾಣಿಸಿದ್ದ ವೇಳೆ ಈ ವಿಡಿಯೋ ಮಾಡಲಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಸದ್ಯ ಬಾಬಿ ಕಟಾರಿಯಾ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ಈ ಪ್ರಕರಣ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now