• June 2, 2026

ಶಿವಾನಂದ ಸರ್ಕಲ್ ಬಳಿ ನಿರ್ಮಾಣ ಆಗುತ್ತಿರುವ ಸ್ಟೀಲ್ ಬ್ರಿಡ್ಜ್ ಗೆ ಪುನೀತ ರಾಜ್ ಕುಮಾರ್ ಹೆಸರಿಡಲು ಬಿಬಿಎಂಪಿಗೆ ಮನವಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಒಂದು ವರ್ಷ ಹತ್ತಿರವಾಗುತ್ತ ಬಂದಿದೆ. ಆದರೆ ಇಂದಿಗೂ ಅಭಿಮಾನಿಗಳು ನಿತ್ಯ ಅಪ್ಪು ಅವರನ್ನು ನೆನಪು ಮಾಡಿಕೊಳ್ಳುತ್ತಿರುತ್ತಾರೆ. ಸಾಮಾಜಿಕ ಕೆಲಸಗಳ ಮೂಲಕ ಪುನೀತ್ ಹೆಸರನ್ನು ಹಚ್ಚ ಹಸಿರಾಗಿಡಲು ಪ್ರಯತ್ನಿಸುತ್ತಿದ್ದಾರೆ. ಈಗಾಗ್ಲೆ ಪುನೀತ್ ರಾಜ್ ಕುಮಾರ್ ಹೆಸರನ್ನು ಅನೇಕ ರಸ್ತೆ, ಪಾರ್ಕ್ ಸೇರಿದಂತೆ ಸಾಕಷ್ಟು ಕಡೆಗಳಿಗೆ ಇಡಲಾಗಿದೆ. ಇದೀಗ ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ನಿರ್ಮಾಣ ಹಂತದಲ್ಲಿರುವ ಸ್ಟೀಲ್ ಬ್ರಿಡ್ಜ್ ಫ್ಲೈಓವರ್ ಗೆ ಪುನೀತ್ ರಾಜ್ ಕುಮಾರ್ ಹೆಸರು ಇಡಬೇಕು ಎಂಬ ಚರ್ಚೆ ಶುರುವಾಗಿದೆ. ಈ ಬಗ್ಗೆ ಬಿಬಿಎಂಪಿಗೆ ಮನವಿ ಮಾಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್ ಆರ್ ರಮೇಶ್ ಹೇಳಿದ್ದಾರೆ. ಶಿವಾನಂದ ಸರ್ಕಲ್ ಬಳಿ ನಿರ್ಮಾಣ ಆಗುತ್ತಿರುವ ಸ್ಟೀಲ್ ಬ್ರಿಡ್ಜ್ ತಡವಾಗಿ ನಿರ್ಮಾಣ ಆಗುತ್ತಿರಲು ಕಾರಣ ಶಿವಾನಂದ ಸ್ಟೋರ್ ನವರು. ಈಗ ಈ ಸ್ಟೀಲ್ ಬ್ರಿಡ್ಜ್ ಗೆ ಅವರ ಹೆಸರನ್ನು ಇಡಬಾರದು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಳಿ ಈ ನೂತನ ಬ್ರಿಡ್ಜ್ ನಿರ್ಮಾಣ ಆಗುತ್ತಿರುವ ಕಾರಣ ಎಲ್ಲರೂ ಚರ್ಚೆ ಮಾಡಿ ಡಾ. ಪುನೀತ್ ರಾಜ್​ಕುಮಾರ್​ ಅವರ ಹೆಸರನ್ನು ಇಡಬೇಕು ಎಂದು ರಮೇಶ್ ಹೇಳಿದ್ದಾರೆ. ಇನ್ನೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಹಾಗೂ ಕನಸಿನ ಸಿನಿಮಾ ಗಂಧದ ಗುಡಿ ಇದೇ ಅಕ್ಟೋಬರ್ 28ರಂದು ತೆರೆಗೆ ಬರ್ತಿದೆ. ಈಗಾಗ್ಲೆ ಕೋಟ್ಯಾಂತರ ಮಂದಿ ಟ್ರೈಲರ್ ನೋಡಿ ಮೆಚ್ಚಿಕೊಂಡಿದ್ದು ಇದೀಗ ಚಿತ್ರವನ್ನು ಕಣ್ಮುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now