• June 19, 2026

ಪಾರ್ವತಿ, ನಿತ್ಯಾ ಪ್ರಗ್ಸೆನ್ಸಿ ಪೋಸ್ಟ್ ಕುರಿತು ಕೊನೆಗೂ ಹೊರ ಬಿತ್ತು ಅಸಲಿ ಸತ್ಯ

ಇತ್ತೀಚೆಗೆ ನಟಿಯರಾದ ನಿತ್ಯಾ ಮೆನನ್ ಹಾಗೂ ಪಾರ್ವತಿ ಪ್ರೆಗ್ಸೆನ್ಸಿ ಫೋಸ್ಟ್ ಶೇರ್ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಇವರಿಬ್ಬರು ಮದುವೆಯಾಗದೆ ತಾಯಿಯಾಗುತ್ತಿದ್ದಾರಾ ಎಂಬ ಚರ್ಚೆ ಕೂಡ ಶುರುವಾಗಿತ್ತು. ಇದೀಗ ಈ ಬಗ್ಗೆ ಇಬ್ಬರು ನಟಿಯರು ಗುಟ್ಟುಬಿಟ್ಟುಕೊಟ್ಟಿದ್ದಾರೆ. ವಂಡರ್ ವುಮೆನ್ ಚಿತ್ರಕ್ಕಾಗಿ ಪಾರ್ವತಿ ಹಾಗೂ ನಿತ್ಯಾ ಮೆನನ್ ಒಂದಾಗುತ್ತಿದ್ದು ಇದೇ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪ್ರಗ್ಸೆನ್ಸಿ ಫೋಸ್ಟ್ ಹಾಕಿರುವುದು ತಿಳಿದಿದೆ. ಅಂಜಲಿ ಮೆನನ್ ನಿರ್ದೇಶನದ `ವಂಡರ್ ವುಮೆನ್’ನಲ್ಲಿ ನಿತ್ಯಾ ಮೆನನ್ ಹಾಗೂ ಪಾರ್ವತಿ, ಪದ್ಮ ಪ್ರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಚಿತ್ರದ ಟ್ರೈಲರ್ ಕೂಡ ರಿಲೀಸ್ ಸದ್ದು ಮಾಡುತ್ತಿದೆ. `ವಂಡರ್ ವುಮೆನ್’  ಪ್ರೆಗ್ನೆನ್ಸಿ ಕಥೆಯಾಗಿದ್ದು, ಜೀವನದಲ್ಲಿ ಮಹಿಯರು ಎದುರಿಸುವ ಸವಾಲಿನ ಬಗ್ಗೆ ತೆರೆಯ ಮೇಲೆ ತೋರಿಸಲು ಚಿತ್ರತಂಡ ರೆಡಿಯಾಗಿದ್ದಾರೆ. ಇದೇ ಕಾರಣಕ್ಕೆ ಪಾರ್ವತಿ ಹಾಗೂ ನಿತ್ಯಾ ಮೆನನ್ ಪ್ರಗ್ಸೆನ್ಸಿ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಪಾರ್ವತಿ ಹಾಗೂ ನಿತ್ಯಾ ಮೆನನ್ ಇಬ್ಬರು ಕೂಡ ಕನ್ನಡ ಪ್ರೇಕ್ಷಕರಿಗೆ ಚಿರ ಪರಿಚಿತರು. ಪಾರ್ವತಿ ಪುನೀತ್ ರಾಜ್ ಕುಮಾರ್ ನಟನೆಯ ಮಿಲನ ಚಿತ್ರದಲ್ಲಿ ನಟಿಸಿದ್ರೆ, ನಿತ್ಯಾ ಮೆನನ್ ಮೈನಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಈ ಇಬ್ಬರು ಪ್ರಗ್ಸೆನ್ಸಿ ವುಮೆನ್ ಚಿತ್ರದಲ್ಲಿ ಒಂದಾಗುತ್ತಿದ್ದು ನವೆಂಬರ್ 18ಕ್ಕೆ ಸಿನಿಮಾ ತೆರೆಗೆ ಬರಲಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now