ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನಟನೆಯಿಂದ ಬ್ರೇಕ್ ಪಡೆದುಕೊಳ್ಳುತ್ತಿದ್ದಾರೆ ನಿತ್ಯಾ ಮೆನನ್: ಕಾರಣ ತಿಳಿಸಿದ ‘ಮೈನಾ’ ಬೆಡಗಿ
ನಾನು ಸದ್ಯಕ್ಕೆ ಮದುವೆ ಆಗುತ್ತಿಲ್ಲ. ಸದ್ಯ ಹರಿದಾಡುತ್ತಿರುವ ಸುದ್ದಿಯಲ್ಲ ಸತ್ಯವಿಲ್ಲ. ನನ್ನ ಮದುವೆಯ ಬಗ್ಗೆ ಸ್ಪಷ್ಟನೆ ಪಡೆಯದೇ ಸುದ್ದಿ ಪ್ರಕಟಿಸಿದ್ದಾರೆ. ಮದುವೆ ವಿಚಾರದಲ್ಲಿ ನನ್ನದು ಸದ್ಯಕ್ಕಂತೂ ಯಾವುದೇ ಪ್ಲ್ಯಾನ್ ಇಲ್ಲ ಎಂದಿದ್ದಾರೆ.
ನಾನು ನಟನೆಯಿಂದ ಒಂದು ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ. ಒಂದಷ್ಟು ಸಿನಿಮಾ ಮಾಡಿದ ಮೇಲೆ ಒಂದು ಬ್ರೇಕ್ ಪಡೆದುಕೊಳ್ಳುತ್ತೇನೆ. ರೋಬೋಟ್ ರೀತಿ ಕೆಲಸ ಮಾಡಲು ನನಗೆ ಸಾಧ್ಯವಿಲ್ಲ. ಹೀಗಾಗಿ ಒಂದು ವಿರಾಮ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಕಳೆದ ಒಂದು ವರ್ಷದಿಂದ ಸಾಕಷ್ಟು ಕೆಲಸ ಮಾಡಿದ್ದು, ಐದಾರು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಈ ಸಿನಿಮಾಗಳಿಗಾಗಿ ನಾನು ನಿತ್ಯ ಕೆಲಸ ಮಾಡಿದ್ದೇನೆ. ಹೀಗಾಗಿ ನನಗೆ ಒಂದು ಬ್ರೇಕ್ ಬೇಕಿದೆ ಎಂದು ನಿತ್ಯಾ ಮೆನನ್ ಹೇಳಿದ್ದಾರೆ.
