ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನಯನತಾರಾ- ವಿಘ್ನೇಶ್ ಮದುವೆಯಲ್ಲಿ ಸ್ಟಾರ್ ಕಲಾವಿದರು: ಫೋಟೋ ನೋಡಿ ಮೆಚ್ಚುಗೆ ಸೂಚಿಸಿದ ಅಭಿಮಾನಿಗಳು
ನಯನತಾರಾ ಹಾಗೂ ವಿಘ್ನೇಶ್ ಮದುವೆಗೆ ಸ್ಟಾರ್ ಕಲಾವಿದರ ದಂಡೆ ಹರಿದು ಬಂದಿತ್ತು. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್, ನಿರ್ದೇಶಕ ಅಟ್ಲಿ, ನಟ ಸೂರ್ಯ ದಂಪತಿ, ವಿಜಯ್ ಸೇತುಪತಿ ದಂಪತಿ, ಇಳಯರಾಜ ಸೇರಿದಂತೆ ಸಾಕಷ್ಟು ಸ್ಟಾರ್ ಗಳು ಮದುವೆಗೆ ಹಾಜರಿದ್ದರು. ಸದ್ಯ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಕಳೆದ ತಿಂಗಳು ಜೂನ್ 9ರಂದು ಐಷಾರಾಮಿ ರೆಸಾರ್ಟ್ ನಲ್ಲಿ ನಯನತಾರಾ ಹಾಗೂ ವಿಘ್ನೇಶ್ ಶವನ್ ನವ ಜೀವನಕ್ಕೆ ಕಾಲಿಟ್ಟಿದ್ದು ಸದ್ಯ ನಯನತಾರಾ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾದ್ದಾರೆ.
ಈ ಸಂಭ್ರಮದಲ್ಲಿ ನಟಿ ನಯನತಾರಾ ಇನ ಸ್ಟಾಗ್ರಾಂ ಖಾತೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗಿರೋ ಫೋಟೋವೊಂದನ್ನ ಹಂಚಿಕೊಳ್ಳುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ಕಳೆದ ತಿಂಗಳು ಜೂನ್ 9ರಂದು ಐಷಾರಾಮಿ ರೆಸಾರ್ಟ್ ನಲ್ಲಿ ನಯನತಾರಾ ಹಾಗೂ ವಿಘ್ನೇಶ್ ಶವನ್ ನವ ಜೀವನಕ್ಕೆ ಕಾಲಿಟ್ಟರು. ನಯನತಾರಾ ಮದುವೆಗೆ ಶಾರುಖ್ ಖಾನ್, ರಜನಿಕಾಂತ್ ಸೇರಿದಂತೆ ಸಾಕಷ್ಟು ಕಲಾವಿದರು ಮದುವೆಗೆ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದರು.
ನಯನತಾರಾ ಹಾಗೂ ವಿಘ್ನೇಶ್ ಮದುವೆ ಕೆಲವೊಂದು ಫೋಟೋಗಳನ್ನ ಬಿಟ್ಟರೆ ಬೇರೆ ಯಾವುದೇ ಫೋಟೋಗಳು ಅಥವಾ ವಿಡಿಯೋಗಳು ಬಿಡಗಡೆ ಮಾಡಿಲ್ಲ. ಇದೀಗ ಮದುವೆಯಾಗಿ ಒಂದು ತಿಂಗಳು ಕಳೆದಿರೋ ಹಿನ್ನೆಲೆಯಲ್ಲಿ ನಯನತಾರಾ ರಜನಿಕಾಂತ್ ಜೊತೆಗಿರೋ ಫೋಟೋವನ್ನ ಹಂಚಿಕೊಂಡಿದ್ದಾರೆ.
ನಯನತಾರಾಗೆ ರಜನಿಕಾಂತ್ ಎಂದರೆ ತುಂಬಾ ಇಷ್ಟ. ರಜನಿಕಾಂತ್ ಜೊತೆ ನಾಲ್ಕೈದು ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಜೊತೆಗೆ ರಜನಿಕಾಂತ್ ಮನೆ ಪಕ್ಕದಲ್ಲೇ ಇತ್ತೀಚೆಗೆ ಮನಯೊಂದನ್ನು ಖರೀದಿಸಿದ್ದಾರಂತೆ. ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆಯಾಗಿ ಒಂದು ತಿಂಗಳು ಕಳೆದಿರೋ ಹಿನ್ನೆಲೆಯಲ್ಲಿ ನವ ಜೋಡಿಗೆ ಸಾಕಷ್ಟು ಮಂದಿ ಶುಭ ಹಾರೈಸಿದ್ದಾರೆ.
