• January 1, 2026

ಬಾಡಿಗೆ ತಾಯಿ ಮೂಲಕ ನಯನತಾರಾ ಮಗು ಪಡೆದ ಪ್ರಕರಣ: ಆಸ್ಪತ್ರೆ ಬಂದ್ ಮಾಡಲು ಸೂಚನೆ

ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ವಿಘ್ನೇಶ್ ಶಿವನ್ ದಂಪತಿ ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳ ಪೋಷಕರಾಗಿದ್ದಾರೆ. ಬಾಡಿಗೆ ಪೋಷಕರಾದ ಬೆನ್ನಲೆ ದಂಪತಿಗಳ ವಿರುದ್ಧ ಸಾಕಷ್ಟು ಆರೋಪ ಕೇಳಿ ಬಂದಿತ್ತು. ಇದೀಗ ಪ್ರರಕಣ ತನಿಖೆ ಮುಗಿದಿದ್ದು ದಂಪತಿಗಳು ಬಾಡಿಗೆ ಪೋಷಕರಾಗುವ ವೇಳೆ ದಂಪತಿಗಳು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ತಿಳಿದು ಬಂದಿದೆ. ಕಳೆದ ಆರು ವರ್ಷಗಳ ಹಿಂದೆಯೇ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಕಳೆದ ಐದು ತಿಂಗಳ ಹಿಂದೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದರು. ಅಲ್ಲದೆ ಬಾಡಿಗೆ ಮಗು ಪಡೆಯುವ ವೇಳೆ ಕಾನೂನು ರೀತಿಯಲ್ಲಿ ಮಗು ಪಡೆದಿದ್ದಾರೆ ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ. ಆದರೆ ಬಾಡಿಗೆ ತಾಯಿಗೆ ಟ್ರೀಟ್​ಮೆಂಟ್​ ನೀಡಿದ ಬಗ್ಗೆ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲು ತನಿಖಾ ತಂಡ ಸೂಚಿಸಿದೆ. ಅಲ್ಲದೇ, ತಾತ್ಕಾಲಿಕವಾಗಿ ಈ ಆಸ್ಪತ್ರೆಯನ್ನು ಮುಚ್ಚಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ. ಬಾಡಿಗೆ ತಾಯಿ ಪಡೆಯಲು ಕಾನೂನಿನಲ್ಲಿ ಕೆಲವೊಂದು ನಿಯಮಗಳಿದೆ. ಅದರ ಪ್ರಕಾರ ಬಾಡಿಗೆ ತಾಯಿಯಾಗುವ ಮಹಿಳೆ 25ರಿಂದ 35 ವರ್ಷದ ಒಳಗಿರಬೇಕು. ಆಕೆಗೆ ಮದುವೆಯಾಗಿರಬೇಕು ಮತ್ತು ವಯಸ್ಸು 25ರಿಂದ 35 ವರ್ಷದ ಒಳಗಿರಬೇಕು. ಆಕೆ ಈಗಾಗಲೇ ಒಂದು ಮಗುವನ್ನು ಪಡೆದಿರಬೇಕು. ಒಮ್ಮೆ ಮಾತ್ರ ಆಕೆ ಬಾಡಿಗೆ ತಾಯಿ ಆಗಬಹುದು. ಈ ಕೆಲಸಕ್ಕೆ ಹಣ ಪಡೆಯುವಂತಿಲ್ಲ ಎಂಬಿತ್ಯಾದಿ ನಿಮಯಗಳಿವೆ. ಇದೆಲ್ಲವನ್ನೂ ನಯನತಾರಾ-ವಿಘ್ನೇಶ್​ ಶಿವನ್​ ಪಾಲಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now