• February 10, 2026

ನಯನತಾರಾ, ವಿಘ್ನೇಶ್ ಮದುವೆಯಾಗಿ ಒಂದು ತಿಂಗಳು: ತಲೈವನ ಜೊತೆಗಿರೋ ಫೋಟೋ ಹಂಚಿಕೊಂಡ ಲೇಡಿ ಸೂಪರ್ ಸ್ಟಾರ್

ತಮಿಳು ಚಿತ್ರರಂಗದ ಖ್ಯಾತ ನಟಿ, ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಮದುವೆಯಾಗಿ ಇಂದಿಗೆ ಒಂದು ತಿಂಗಳು ಕಳೆದಿದೆ. ಈ ಸಂಭ್ರಮದಲ್ಲಿ ನಟಿ ನಯನತಾರಾ ಇನ ಸ್ಟಾಗ್ರಾಂ ಖಾತೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗಿರೋ ಫೋಟೋವೊಂದನ್ನ ಹಂಚಿಕೊಳ್ಳುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಕಳೆದ ತಿಂಗಳು ಜೂನ್ 9ರಂದು ಐಷಾರಾಮಿ ರೆಸಾರ್ಟ್ ನಲ್ಲಿ ನಯನತಾರಾ ಹಾಗೂ ವಿಘ್ನೇಶ್ ಶವನ್ ನವ ಜೀವನಕ್ಕೆ ಕಾಲಿಟ್ಟರು. ನಯನತಾರಾ ಮದುವೆಗೆ ಶಾರುಖ್ ಖಾನ್, ರಜನಿಕಾಂತ್ ಸೇರಿದಂತೆ ಸಾಕಷ್ಟು ಕಲಾವಿದರು ಮದುವೆಗೆ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದರು. ನಯನತಾರಾ ಹಾಗೂ ವಿಘ್ನೇಶ್ ಮದುವೆ ಕೆಲವೊಂದು ಫೋಟೋಗಳನ್ನ ಬಿಟ್ಟರೆ ಬೇರೆ ಯಾವುದೇ ಫೋಟೋಗಳು ಅಥವಾ ವಿಡಿಯೋಗಳು ಬಿಡಗಡೆ ಮಾಡಿಲ್ಲ. ಇದೀಗ ಮದುವೆಯಾಗಿ ಒಂದು ತಿಂಗಳು ಕಳೆದಿರೋ ಹಿನ್ನೆಲೆಯಲ್ಲಿ ನಯನತಾರಾ ರಜನಿಕಾಂತ್ ಜೊತೆಗಿರೋ ಫೋಟೋವನ್ನ ಹಂಚಿಕೊಂಡಿದ್ದಾರೆ. ನಯನತಾರಾಗೆ ರಜನಿಕಾಂತ್ ಎಂದರೆ ತುಂಬಾ ಇಷ್ಟ. ರಜನಿಕಾಂತ್ ಜೊತೆ ನಾಲ್ಕೈದು ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಜೊತೆಗೆ ರಜನಿಕಾಂತ್ ಮನೆ ಪಕ್ಕದಲ್ಲೇ ಇತ್ತೀಚೆಗೆ ಮನಯೊಂದನ್ನು ಖರೀದಿಸಿದ್ದಾರಂತೆ. ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆಯಾಗಿ ಒಂದು ತಿಂಗಳು ಕಳೆದಿರೋ ಹಿನ್ನೆಲೆಯಲ್ಲಿ ನವ ಜೋಡಿಗೆ ಸಾಕಷ್ಟು ಮಂದಿ ಶುಭ ಹಾರೈಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now