ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಲೇಡಿ ಸೂಪರ್ ಸ್ಟಾರ್ ನಯನತಾರಾ ನಿರ್ಧರದಿಂದ ಬೇಸರಕೊಂಡ ಅಭಿಮಾನಿಗಳು
ನಟನೆಯ ಜೊತೆಗೆ ವೈಯಕ್ತಿಯ ಜೀವನಕ್ಕೂ ಸಮಯ ನೀಡುತ್ತಿರುವ ನಯನತಾರಾ ಇನ್ನು ಮುಂದೆ ಫುಲ್ ಟೈಂ ಖಾಸಗಿ ಜೀವನದತ್ತ ಗಮನ ಹರಿಸಲು ನಿರ್ಧರಿಸಿದ್ದಾರಂತೆ. ಮದುವೆಗೂ ಮುಂಚೆ ಒಪ್ಪಿಕೊಂಡಿರುವ ಸಿನಿಮಾ ಮುಗಿದ ಬಳಿಕ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಸರಿಯಲು ನಯನತಾರಾ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ನಯನತಾರಾ ಶಾರುಖ್ ಖಾನ್ ಜತೆ `ಜವಾನ್’, ಪೃಥ್ವಿರಾಜ್ ಜತೆ `ಗೋಲ್ಡ್’, ಚಿರಂಜೀವಿ ಜತೆಯಲಿ `ಗಾಡ್ ಫಾದರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಎಲ್ಲಾ ಪ್ರಾಜೆಕ್ಟ್ ಮುಗಿದ ಬಳಿಕ ನಯನತಾರಾ ನಟನೆಗೆ ಫುಲ್ ಸ್ಟಾಪ್ ಇಡಲಿದ್ದಾರಂತೆ. ಒಟ್ನಲ್ಲಿ ನಯನತಾರಾ ಅಭಿಮಾನಿಗಳು ಆಕೆಯ ನಿರ್ಧರದಿಂದ ಸಖತ್ ಬೇಸರಕೊಂಡಿದ್ದಾರೆ.
