ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಹೆಂಡತಿಗೆ ಮೊಟ್ಟೆ ಕೂಡ ಬೇಯಿಸಲು ಬರಲ್ಲ: ನಿರ್ಮಾಪಕ ರವೀಂದರ್ ಅಳಲು
ಮಹಾಲಕ್ಷ್ಮೀ ಕೈ ಹಿಡಿದ ಬಳಿಕ ರವೀಂದರ್ ಸೋಷಿಯಲ್ ಮೀಡಿಯಾದಲ್ಲಿ ಮತ್ತಷ್ಟು ಆಕ್ಟೀವ್ ಆಗಿದ್ದಾರೆ. ಆಗಾಗ ಕೆಲವು ಘಟನೆಗಳನ್ನು ಸಮಾಜಿಕ ಜಾಲಾ ತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಪತ್ನಿಯನ್ನು ಮಿಡ್ ನೈಟ್ ಡಿನ್ನರ್ ಗೆ ಕರೆದುಕೊಂಡು ಹೋಗಿದ್ದ ರವೀಂದರ್ ಇದೀಗ ಹೆಂಡತಿ ಬೇಯಿಸಿದ ಮೊಟ್ಟೆಯನ್ನು ಫೋಟೋ ಸಮೇತ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಎರಡು ಮೊಟ್ಟೆಗಳನ್ನು ಬೇಯಿಸಲು ಇಟ್ಟಿದ್ದ ಮಹಾಲಕ್ಷ್ಮಿ, ಅದನ್ನು ಸರಿಯಾಗಿ ನೋಡಿಕೊಳ್ಳದೇ ಇರುವ ಕಾರಣಕ್ಕಾಗಿ ಮೊಟ್ಟೆಗಳು ಸೀದು ಹೋಗಿವೆ. ಅವುಗಳನ್ನು ಫೋಟೋ ತಗೆದಿರುವ ರವೀಂದ್ರ, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪತ್ನಿಯ ಕುಕ್ಕಿಂಗ್ ಸ್ಕಿಲ್ಸ್ ಬಗ್ಗೆ ತಮಾಷೆಯಾಗಿಯೇ ಅವರು ಶೇರ್ ಮಾಡಿದ್ದಾರೆ. ಮೊಟ್ಟೆ ಸೀದು ಹೋಗಿದ್ದನ್ನು ನಾನು ಜೀವಮಾನದಲ್ಲೇ ನೋಡಿಲ್ಲ ಎಂದು ರವೀಂದರ್ ಬರೆದುಕೊಂಡಿದ್ದಾರೆ. ಅಲ್ಲದೇ, ನ್ಯೂ ಲೈಫ್ ಮೈ ವೈಫ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
