• December 22, 2025

ಮುರಳಿ ವಿಜಯ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ

ಟೀಂ ಇಂಡಿಯಾ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಿಂಚು ಹರಿಸಿದ್ದ ವಿಜಯ್ 2002 ರಿಂದ 2018ರ ವರೆಗೆ ತಂಡದಲ್ಲಿದ್ದರು. ಆ ಬಳಿಕ ಫಾರ್ಮ್ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು. ನಂತರ ತಂಡಕ್ಕೆ ಕಂಬ್ಯಾಕ್ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ ಟೀಂ ಇಂಡಿಯಾ ಪರ ಒಟ್ಟು 61 ಟೆಸ್ಟ್, 17 ಏಕದಿನ, 9 ಟಿ20 ಸೇರಿ ಒಟ್ಟು 87 ಪಂದ್ಯದಿಂದ 4,490 ರನ್ ಸಿಡಿಸಿದ್ದಾರೆ. 61 ಟೆಸ್ಟ್ ಪಂದ್ಯದಿಂದ 3,982 ರನ್ ಹೊಡೆದು ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನ ಪಡೆದಿದ್ದರು. ಇದಲ್ಲದೆ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK), ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಪಂಜಾಬ್ ಕಿಂಗ್ಸ್‌ ಪರ ಆಡಿದ್ದರು. ನಿವೃತ್ತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಜಯ್, ನನ್ನ 2002 ರಿಂದ 2018ರ ವರೆಗಿನ ಕ್ರಿಕೆಟ್ ಪಯಣಕ್ಕೆ ಅಂತ್ಯವಾಡುತ್ತಿದ್ದೇನೆ. ಈವರೆಗೆ ಕ್ರಿಕೆಟ್ ಆಡಲು ಅವಕಾಶ ನೀಡಿದ್ದ ಬಿಸಿಸಿಐ (BCCI), ತಮಿಳುನಾಡು ಕ್ರಿಕೆಟ್ ಬೋರ್ಡ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್, ಚೆಂಪ್ಲಾಸ್ಟ್ ಸನ್ಮಾರ್‌ಗೆ ಧನ್ಯವಾದಗಳು. ನನ್ನ ಕನಸು ನನಸಾಗಲು ಸಹಕರಿಸಿದ ಕೋಚ್, ಮೆಂಟರ್, ಸಹ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದ. ಕ್ರೀಡಾ ಬದುಕಿನ ಉತ್ತುಂಗದ ಮಟ್ಟವಾಗಿ ದೇಶಕ್ಕಾಗಿ ಆಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.      

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now