• December 22, 2025

ತವರಿನ ಅಭಿಮಾನಿಗಳ ಮುಂದೆ ಧೋನಿ ನಿವೃತ್ತಿ: ಚೆನ್ನೈನಲ್ಲಿ ಐಪಿಎಲ್ ಗೆ ಟೀಂ ಇಂಡಿಯಾ ಮಾಜಿ ನಾಯಕ ಗುಡ್ ಬೈ

ಟೀಂ ಇಂಡಿಯಾ ಮಾಜಿ ನಾಯಕ, ವಿಕೆಟ್ ಕೀಪರ್- ಬ್ಯಾಟ್ಸ್​ಮನ್​ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತವರಿನ ಅಭಿಮಾನಿಗಳ ಮುಂದೆ ಐಪಿಎಲ್‍ಗೆ ನಿವೃತ್ತಿ ಘೋಷಿಸುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ‘ಇಂಡಿಯಾ ಸಿಮೆಂಟ್ಸ್’ ನ 75 ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅಭಿಮಾನಿಗಳೊಂದಿಗೆ ಮಾತನಾಡಿದ ದೋನಿ ತಮ್ಮ ನಿವೃತ್ತಿಯ ಕುರಿತು ತುಟಿ ಬಿಚ್ಚಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ಗಾಗಿ ನಾನು ಇನ್ನೂ ಆಡಬಹುದು. ಹೀಗಾಗಿ ನನ್ನ ವಿದಾಯದ ಪಂದ್ಯವನ್ನು ನೀವು ಕೂಡ ಬಂದು ನೋಡಬಹುದು ಎಂದಿದ್ದರು.  ನನ್ನ ಕೊನೆಯ ಪಂದ್ಯವು ಚೆನ್ನೈನಲ್ಲಿ ನಡೆಯಬಹುದು. ಅದುವೇ ವಿದಾಯ ಪಂದ್ಯವಾಗಿರಲಿದೆ. ಹಾಗಾಗಿ ನನಗೆ ಬೀಳ್ಕೊಡಲು ನಿಮಗೂ ಅವಕಾಶ ಸಿಗಲಿದೆ. ನಾನು ಚೆನ್ನೈನಲ್ಲಿ ಕೊನೆಯ ಪಂದ್ಯ ಆಡಲು ಬಯಸಿದ್ದೇನೆ ಎಂದು ದೋನಿ ಹೇಳಿದು ಅದೀಗ ನೆರವೇರುವ ಸಾಧ್ಯತೆ ಇದೆ. ಧೋನಿ ಕೊನೆಯ ಆಸೆಯಂತೆ ಅವರ ಕೊನೆಯ ಪಂದ್ಯ ಚೆನ್ನೈನಲ್ಲೇ ನಡೆಯುವ ಸಾಧ್ಯತೆ ಇದೆ. 2023ರ ಐಪಿಎಲ್ ಪಂದ್ಯಗಳು ತವರಿನ ಚರಣದ ಪಂದ್ಯಗಳೊಂದಿಗೆ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಈ ಸುದ್ದಿ ಹೊರಬಿದ್ದ ಬಳಿಕ ಧೋನಿ ನಿವೃತ್ತಿ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ ಎಂಬುದು ಬಹತೇಕ ಖಚಿಗೊಂಡಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now