• January 1, 2026

ಸಿನಿಮಾ ರಂಗಕ್ಕೆ ಕೂಲ್ ಕ್ಯಾಪ್ಟನ್ ಎಂಟ್ರಿ: ತಮಿಳು ಸಿನಿಮಾ ನಿರ್ಮಾಣ ಮಾಡಲು ಮುಂದಾದ ಎಂ ಎಸ್ ದೋನಿ

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ದೋನಿ ಕ್ರಿಕೆಟ್ ಜೊತೆಗೆ ಹಲವು ಉದ್ಯಮಗಳಲ್ಲು ತೊಡಗಿಕೊಂಡಿದ್ದಾರೆ. ಇದೀಗ ‘ದೋನಿ ಎಂಟರ್ ಟೈನ್’ ಮೂಲಕ ಸಿನಿ ರಂಗಕ್ಕೂ ಕಾಲಿಟ್ಟಿದ್ದಾರೆ. ಧೋನಿ ಎಂಟರ್‌ಟೈನ್‌ಮೆಂಟ್‌ ಮೂಲಕ ಜನರನ್ನು ಎಂಟರ್‌ಟೈನ್ ಮಾಡಲು ಮುಂದಾಗಿದ್ದಾರೆ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ದೋನಿ. ಧೋನಿ ಎಂಟರ್‌ಟೈನ್‌ಮೆಂಟ್‌ ಮೂಲಕ ಹೊರ ಬರುತ್ತಿರುವ ಸಿನಿಮಾ ಪತ್ನಿ ಸಾಕ್ಷಿ ಪರಿಕಲ್ಪನೆಯಲ್ಲಿ ಮೂಡಿ ಬರುತ್ತಿದೆ. ತಮಿಳು ನಾಡಿನ ಜೊತೆ ಉತ್ತಮ ಬಾಂದವ್ಯ ಹೊಂದಿರುವ ದೋನಿ ಮೊದಲ ಚಿತ್ರವನ್ನು ತಮಿಳಿನಲ್ಲೇ ರಿಲೀಸ್ ಮಾಡುವ ಆಲೋಚನೆಯಲ್ಲಿದ್ದಾರೆ. ಧೋನಿ ನಿರ್ಮಾಣದಲ್ಲಿ ಮೂಡಿ ಬರಲಿರುವ ಮೊದಲ ಚಿತ್ರವನ್ನು ರಮೇಶ್ ತಮಿಳ್​ಮಣಿ ನಿರ್ದೇಶನ ಮಾಡಲಿದ್ದಾರೆ. ರಮೇಶ್ ತಮಿಳ್​ಮಣಿ ಈ ಮೊದಲು ‘ಅಥರ್ವ-ದಿ ಒರ್ಜಿನ್’ ಹೆಸರಿನ ಗ್ರಾಫಿಕ್ ನಾವೆಲ್ ಅನ್ನು ಬರೆದಿದ್ದಾರೆ. ಧೋನಿ ಎಂಟರ್‌ಟೈನ್‌ಮೆಂಟ್‌ ಮೂಲಕ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ನಿರ್ಮಿಸೋ ಯೋಚನೆಯಲ್ಲಿದ್ದಾರೆ ಮಹೇಂದ್ರ ಸಿಂಗ್ ದೋನಿ ಹಾಗೂ ಸಾಕ್ಷಿ ಸಿಂಗ್ ದೋನಿ. ಧೋನಿ ಎಂಟರ್‌ಟೈನ್‌ಮೆಂಟ್ ಅನೇಕ ಚಲನಚಿತ್ರ ನಿರ್ಮಾಪಕರು ಮತ್ತು ಸ್ಕ್ರಿಪ್ಟ್ ರೈಟರ್‌ಗಳೊಂದಿಗೆ ವೈಜ್ಞಾನಿಕ ಕಾದಂಬರಿ, ಸಸ್ಪೆನ್ಸ್ ಥ್ರಿಲ್ಲರ್, ಅಪರಾಧ ಕಥೆ, ನಾಟಕ ಮತ್ತು ಹಾಸ್ಯ ಸೇರಿದಂತೆ ಅತ್ಯಾಕರ್ಷಕ ಮತ್ತು ಅರ್ಥಪೂರ್ಣ ಕಂಟೆಂಟ್ ರಚಿಸಲು ಮತ್ತು ನಿರ್ಮಿಸಲು ಮಾತುಕತೆ ನಡೆಸುತ್ತಿದೆ ಎಂಬ ಮಾಹಿತಿ ಹೊರ ಬಿದಿದ್ದೆ. ಧೋನಿಗೂ ತಮಿಳುನಾಡಿಗೂ ಉತ್ತಮ ನಂಟಿದೆ. ಧೋನಿ ಮೊದಲಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ, ತಮಿಳುನಾಡಿನಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಧೋನಿ ತಮಿಳುನಾಡಿನ ಜನರೊಂದಿಗೆ ಅಸಾಧಾರಣ ಬಾಂಧವ್ಯ ಹೊಂದಿದ್ದು ಈ ಕಾರಣಕ್ಕೆ ಮೊದಲ ಚಿತ್ರವನ್ನು ತಮಿಳಿನಲ್ಲೇ ರಿಲೀಸ್ ಮಾಡುವ ಆಲೋಚನೆಯಲ್ಲಿ ದೋನಿ ಇದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now