ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
‘ಸೀತಾ ರಾಮಂ’ ಸೂಪರ್ ಹಿಟ್ ಆದ್ಮೇಲೆ ಹೆಚ್ಚಾಯ್ತು ಡಿಮ್ಯಾಂಡ್: ಚಿತ್ರವೊಂದಕ್ಕೆ ಮೃಣಾಲ್ ಠಾಕೂರ್ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?
ಬಣ್ಣದ ಜರ್ನಿ ಆರಂಭಿಸಿದಾಗ ಮೃಣಾಲ್ 5- 10 ಲಕ್ಷ ರೂಪಾಯಿ ಪಡೆಯುತ್ತಿದ್ದರು. ಆದರೆ ಇದೀಗ ಬಾಲಿವುಡ್‌ನಲ್ಲಿ ಮೃಣಾಲ್ ಸಂಭಾವನೆ 2 ಕೋಟಿ ಮುಟ್ಟಿದ್ರೆ, ದಕ್ಷಿಣ ಭಾರತದಲ್ಲಿ ಒಂದು ಕೋಟಿ ಎನ್ನಲಾಗಿದೆ. ಸೀತಾ ರಾಮಂ ಒಂದು ಸಿನಿಮಾ ಹಿಟ್‌ನಿಂದ ಮೃಣಾಲ್ ಇಷ್ಟೊಂದು ಹೈಕ್ ಮಾಡಿಕೊಂಡಿರುವುದು ನೆಟ್ಟಿಗರಿಗೆ ಶಾಕ್ ಆಗಿದೆ. ಇದರ ಜೊತೆ ದುಲ್ಕರ್ ಜೊತೆ ಮತ್ತೊಂದು ತಮಿಳು ಸಿನಿಮಾದಲ್ಲಿ ನಟಿಸಲು ಮೃಣಾಲ್ ಸಹಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಗ್ಲಾಮರ್ ಜೊತೆಗೆ ತಮಗೆ ಸಿಕ್ಕ ಪಾತ್ರಕ್ಕೆ ಮೃಣಾಲ್ನ್ಯಾಯ ಒದಗಿಸುತ್ತಾರೆ. ಹೀಗಾಗಿ ಆಕೆ ಕೇಳಿದಷ್ಟು ಸಂಭಾವನೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ನಿರ್ಮಾಪಕರು ಚರ್ಚೆ ನಡೆಸಿದ್ದಾರೆ.
‘ಸೀತಾ ರಾಮಂ ಸಿನಿಮಾದಲ್ಲಿ ಸೀತಾ ಪಾತ್ರವು ನನ್ನ ಜೀವನ ಅತ್ಯಂತ ವಿಶಿಷ್ಠ ಅನುಭವಗಳಲ್ಲಿ ಒಂದು. ಸಿನಿಮಾ ಕಥೆ ಕೇಳಿದ ಕೆಲವೇ ನಿಮಿಷಗಳಲ್ಲಿ ಬ್ಲ್ಯಾಂಕ್ ಆಗಿಬಿಟ್ಟೆ. ಯಾವ ಕಾರಣಕ್ಕೂ ಈ ಸಿನಿಮಾ ಬಿಡಬಾರದು ಎಂದು ನಿರ್ಧಾರ ಮಾಡಿಕೊಂಡೆ. ದಕ್ಷಿಣ ಭಾರತದಲ್ಲಿ ನನ್ನ ಮೊದಲ ಸಿನಿಮಾ ಇದಾಗಿರುವ ಕಾರಣ ನಿರೀಕ್ಷೆ ಜೊತೆಗೆ ಭಯವಿತ್ತು ಆದರೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಪಡೆದುಕೊಂಡಿದೆ’ ಎಂದು ಮೃಣಾಲ್ ಮಾತನಾಡಿದ್ದಾರೆ.
