• February 10, 2026

ಭಾರತಕ್ಕೆ ಎಂಟ್ರಿಕೊಟ್ಟ ಮಂಕಿಪಾಕ್ಸ್? ಆಸ್ಪತ್ರೆಗೆ ದಾಖಲಾದ ಯುವಕ

ಕೋಲ್ಕತ್ತಾ: ಕೊರೋನಾ ಬಳಿಕ ಇದೀಗ ಭಾರತಕ್ಕೆ ಮತ್ತೊಂದು ಹೊಸ ವೈರಾಣು ಎಂಟ್ರಿಕೊಟ್ಟಿದೆ. ಭಾರತದಲ್ಲಿ ಮೊದಲ ಭಾರಿಗೆ ಮಂಕಿಪಾಕ್ಸ್ ಪ್ರಕರಣ ದಾಖಲಾಗಿದ್ದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಯುವಕನಿಗೆ ಮಂಕಿಪಾಕ್ಸ್ ಇರುವ ಬಗ್ಗೆ ವೈದ್ಯರು ಸಂಶಯ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಳದ ವಿಡ್ನಾಪುರ ಮೂಲಕ ಯುವಕನೋರ್ವ ಯುರೋಪ್ ದೇಶದಿಂವ ವಾಪಸ್ಸಾಗಿದ್ದಾನೆ. ಭಾರತಕ್ಕೆ ಮರಳಿದ ಯುವಕನ ದೇಹದಲ್ಲಿ ಗುಳ್ಳೆಗಳು ಹಾಗೂ ಮಂಕಿಪಾಕ್ಸ್ ರೋಗದ ಲಕ್ಷಣಗಳು ಕಾಣಿಸಿಕೊಂಡಿದೆ. ಹೀಗಾಗಿ ಇದು ಮಂಕಿಪಾಕ್ಸ್ ಕಾಯಿಲೆ ಇರಬಹುದು ಎಂದು ವೈದ್ಯರು ಅನುಮಾನ ವ್ಯಕ್ತಪಡಿಸಿದ್ದು ಸದ್ಯ ಯುವಕನ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯ ಯುವಕನನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದ್ದು, ಯುವಕನ ಸಂಪರ್ಕದಲ್ಲಿರುವವರಿಗೆ ಹಾಗೂ ಕುಟುಂಬಕ್ಕೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now