• March 15, 2026

ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಧೃವಾ ಸರ್ಜಾ ದಂಪತಿ

ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿಗಳಲ್ಲೊಂದು ಸ್ಟಾರ್ ನಟ ಧೃವಾ ಸರ್ಜಾ ಹಾಗೂ ಪ್ರೇರಣಾ. 2019ರಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಹಸೆ ಮಣೆ ಏರಿದ್ದ ಜೋಡಿಗಳು ಮೂರು ವರ್ಷದ ಬಳಿಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಮಾರ್ಟೀನ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಧೃವಾ ಸರ್ಜಾ ಸದ್ಯ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಳ್ಳುವ ಸಂತಸದಲ್ಲಿದ್ದಾರೆ. ಹೌದು. ಪ್ರೇರಣಾ ಹಾಗೂ ಧೃವಾ ಸರ್ಜಾ ಮೊದಲ ಮಗುವಿನ ನಿರೀಕ್ಷೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಪ್ರೇರಣಾ ಜೊತೆ ಬೇಬಿ ಬಂಪ್ ಫೋಟೋ ಶೂಟ್ ನಲ್ಲಿ ಕಾಣಿಸಿಕೊಂಡಿರುವ ಧೃವಾ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಅದರ ಫೋಟೋವನ್ನು ಹಂಚಿಕೊಂಡಿದ್ದಾರೆ. ನಾವು ಜೀವನದ ಹಂತಕ್ಕೆ ಪ್ರವೇಶಿಸಿದ್ದೇವೆ. ಶೀಘ್ರದಲ್ಲಿ ಬರಲಿರುವ ಮಗುವನ್ನು ಆಶಿರ್ವದಿಸಿ ಎಂದು ಧೃವಾ ಸರ್ಜಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಬೇಬಿ ಬಂಪ್ ಫೋಟೋಶೂಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ನೆಚ್ಚಿನ ಜೋಡಿ ಫ್ಯಾನ್ಸ್ ಶುಭಹಾರೈಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now