• January 1, 2026

ರಾಜಕೀಯ ಎಂಟ್ರಿ ಕುರಿತು ಸ್ಪಷ್ಟನೆ ನೀಡಿದ ನಟ ಮೋಹನ್ ಲಾಲ್

ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್ ಲಾಲ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಮೋಹನ್ ಲಾಲ್ ನಟನೆಯ 4-5 ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದ್ದು ಆರೇಳು ಸಿನಿಮಾಗಳು ಪ್ರೀ ಪ್ರೊಡಕ್ಷನ್ ಕೆಲಸದಲ್ಲಿವೆ. ಈ ಮಧ್ಯೆ ಮೋಹನ್ ಲಾಲ್ ರಾಜಕೀಯಕ್ಕೆ ಎಂಟ್ರಿಕೊಡ್ತಾರೆ ಎಂಬ ಸುದ್ದಿ ಜೋರಾಗಿಯೇ ಕೇಳಿ ಬರ್ತಿದ್ದು ಈ ಬಗ್ಗೆ ಸ್ವತಃ ಮೋಹನ್ ಲಾಲ್ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾ ರಂಗದವರು ರಾಜಕೀಯಕ್ಕೆ ಎಂಟ್ರಿಕೊಡುವುದು ಹೊಸದೇನು ಅಲ್ಲ. ಪ್ರತಿಯೊಂದು ಭಾಷೆಯ ಸಾಕಷ್ಟು ಕಲಾವಿದರು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಸಹಜವಾಗಿಯೇ ಮೋಹನ್ ಲಾಲ್ ಕೂಡ ರಾಜಕೀಯಕೆ ಬರ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ಇದೀಗ ಸ್ವತಃ ಮೋಹನ್ ಲಾಲ್ ಸ್ಪಷ್ಟನೆ ನೀಡಿರುವುದರಿಂದ ಸುದ್ದಿಗೆ ಬ್ರೇಕ್ ಬಿದ್ದಿದೆ. ನನಗೆ ರಾಜಕೀಯಕ್ಕೆ ಬರಲ್ಲ, ಅದು ನನ್ನ ಕ್ಷೇತ್ರವಲ್ಲ. ರಾಜಕೀಯಕ್ಕೆ ಸೇರುವ ಬಗ್ಗೆ ಯಾವುದೇ ಗುರಿ ನನಗಿಲ್ಲ ಎಂದು ಹೇಳುವ ಮೂಲಕ ಹರಿದಾಡುತ್ತಿರುವ ಗಾಳಿ ಸುದ್ದಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ನಾನು ಯಾವುದೇ ಒಂದು ಪಕ್ಷ ಸೇರಿದರೆ ಆ ಪಕ್ಷಕ್ಕೆ ಮಾತ್ರ ಸೀಮಿತವಾಗಿರಬೇಕು. ಆದರೆ ಈಗ ಹಾಗಲ್ಲ. ನಮ್ಮ ಯೋಚನೆಗಳನ್ನ ಬೇರೆಯವರೊಂದಿಗೆ ಹಂಚಿಕೊಳ್ಳಬಹುದು ಎಂದಿದ್ದಾರೆ. ಈ ಮೂಲಕ ರಾಜಕೀಯಕ್ಕೆ ಬರುವ ಎಲ್ಲಾ ಊಹಾಪೋಹಗಳಿಗೂ ಸ್ಪಷನೆ ನೀಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now