ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮೊದಲ ದಿನವೇ ಸೈಲೆಂಟ್ ಆದ ಲೈಗರ್: 200 ಕೋಟಿ ಆಫರ್ ಟ್ವಿಟ್ ಗೆ ಕಾಲೆಳೆದ ನೆಟ್ಟಿಗರು
ಲೈಗರ್ ಸಿನಿಮಾವನ್ನು ‘ಓಟಿಟಿ ಸಂಸ್ಥೆಯೊಂದು 200 ಕೋಟಿ ರೂಪಾಯಿಗೆ ಕೇಳಿದೆ. ಇದು ಸಣ್ಣ ಮೊತ್ತದ ಹಣ. ಥಿಯೇಟರ್ ನಲ್ಲಿ ನಾವು ನೋಡಿಕೊಳ್ಳುತ್ತೇವೆ’ ಎಂದು ವಿಜಯ್ ದೇವರಕೊಂಡ ಟ್ವಿಟ್ ಮಾಡಿದ್ದರು. ಆದರೆ ಈಗಿನ ಬಾಕ್ಸ್ ಆಫೀಸ್ ರಿಪೋರ್ಟ್ ನೋಡಿದರೂ, ಆ ಮೊತ್ತದ ಕಾಲು ಭಾಗವಾದರೂ ದುಡ್ಡು ಬರತ್ತಾ ಎಂಬ ಅಂದಾಜು ಶುರುವಾಗಿದೆ.
ಅಂದು ವಿಜಯ್ ದೇವರಕೊಂಡ ಮಾಡಿದ್ದ ಟ್ವೀಟ್ ಇಟ್ಟುಕೊಂಡು ಇಂದು ನೆಟ್ಟಿಗರು ಕಾಲೇಳೆಯುತ್ತಿದ್ದಾರೆ. ಲೈಗರ್ ಸಿನಿಮಾಗಾಗಿ ಹಗಲು ರಾತ್ರಿ ಕೆಲಸ ಮಾಡಿದ್ದ ವಿಜಯ್ ದೇವರಕೊಂಡಗೆ ಮೊದಲ ದಿನದ ಪ್ರತಿಕ್ರಿಯೆ ನಿರಾಸೆ ಮೂಡಿಸಿದೆ.
