• December 22, 2025

ಯುವಕನನ್ನು ಗ್ಯಾಂಗ್‌ರೇಪ್ ಎಸಗಿದ ಯುವತಿಯರು

ಯುವತಿಯರ ಮೇಲೆ ಅತ್ಯಾಚಾರ ಎನ್ನುವ ಸುದ್ದಿಗಳನ್ನು ಸದಾ ಕೇಳುತ್ತಿರುತ್ತಿವೆ. ಆದರೆ, ಯುವಕನನ್ನೇ ರಿವಾಲ್ವರ್‌ನಿಂದ ಬೆದರಿಸಿ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದು ಆಘಾತ ಮೂಡಿಸಿದೆ. ಮುಂದಿನ ದಿನಗಳಲ್ಲಿ ಯುವಕರು ಕೂಡಾ ಒಬ್ಬಂಟಿಯಾಗಿ ತಿರುಗಾಡಲು ಭಯಪಡಬೇಕಾಗಿ ಬರುವುದು ಎನ್ನುವ ಆತಂಕ ಎದುರಾಗಿದೆ.
ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದ ಪೊಲೀಸ್ ಠಾಣೆಯಲ್ಲೊಂದು ಒಂದು ವಿಲಕ್ಷಣ ಪ್ರಕರಣ ದಾಖಲಾಗಿದೆ. ಮೂವರು ಮಹಿಳೆಯರು ತನ್ನನ್ನು ಅಪಹರಿಸಿ ಪುನಃ ಪುನಃ ಅತ್ಯಾಚಾರವೆಸಗಿದರು ಮತ್ತು ನನ್ನ ವೀರ್ಯದ ಸ್ಯಾಂಪಲ್ ತೆಗೆದುಕೊಂಡು ಪರಾರಿಯಾದರು ಎಂದು ವ್ಯಕ್ತಿಯೊಬ್ಬ ಪೊಲೀಸರಲ್ಲಿ ದೂರು ನೀಡಿದ್ದಾನೆ. ವರದಿಗಳ ಪ್ರಕಾರ ಪೋರ್ಟ್ ಎಲಿಜಬೆತ್‌ನ ಕ್ವಜಖಿಲೆ ಸಮೀಪ ನಡೆದು ಹೋಗುತ್ತಿದ್ದ 33 ವರ್ಷದ ವ್ಯಕ್ತಿಯ ಬಳಿ ಬಿಎಂಡಬ್ಲ್ಯು ಕಾರ್ ಒಂದು ಬಂದು ನಿಂತಿತು. ಅದರಲ್ಲಿದ್ದ ಮೂವರು ಮಹಿಳೆಯರು ಪೀಡಿತನ ಬಳಿ ದಾರಿ ಕೇಳಿದ್ದಾರೆ. ಆತನು ಅವರು ಕೇಳಿದ ದಾರಿಯನ್ನು ವಿವರಿಸುತ್ತಿದ್ದಾಗ ಬಂದೂಕು ತೋರಿಸಿ ಆತನನ್ನು ಅಪಹರಿಸಿದ್ದಾರೆ. ಆತನನ್ನು ಕಾರಿನಲ್ಲಿ ಎಳೆದು ಹಾಕಿಕೊಂಡ ಮಹಿಳೆಯರು ಸಂಭೋಗಕ್ಕಾಗಿ ಒತ್ತಾಯಿಸಿದ್ದಾರೆ. ಆದರೆ ಆತ ಪ್ರತಿಭಟಿಸಿದಾಗ ಮತ್ತು ಬರಿಸುವ ಪಾನೀಯವನ್ನು ಕುಡಿಸಿ ಆತನ ಮೇಲೆ ಅತ್ಯಾಚಾರವೆಸಗಿದ್ದಾರೆ. ಅಷ್ಟೇ ಅಲ್ಲದೆ ಆತನ ವೀರ್ಯದ ಸ್ಯಾಂಪಲ್‌ಗಳನ್ನು ಸಹ ಸಂಗ್ರಹಿಸಿದ ಅವರು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಅದನ್ನು ಹಾಕಿ ಕೂಲರ್ ಬಾಕ್ಸ್‌ನಲ್ಲಿ ಭದ್ರವಾಗಿ ಇಟ್ಟುಕೊಂಡಿದ್ದಾರೆ. ಆ ಬಳಿಕ ಅಪಹರಿಸಿದ 500 ಕೀಲೋಮೀಟರ್ ದೂರದಲ್ಲಿ ಆತನನ್ನು ರಸ್ತೆಗೆ ದೂಡಿ ಹೋಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now