• March 16, 2026

Mayuri-HD-Wallpapers-Latest-Mayuri-Wallpapers-HD-Free-.jpg

ಸುದೀಪ್ ಅನುಪಸ್ಥಿತಿಯಲ್ಲಿ ನಡೆಯಿತು ಎಲಿಮಿನೇಷನ್ ಪ್ರಕ್ರಿಯೆ: ಬಿಗ್ ಬಾಸ್ ಮನೆಯಿಂದ ಮಯೂರಿ ಔಟ್

ಈ ವಾರ ಬಿಗ್ ಬಾಸ್ ಸೀಸನ್ 9ರಲ್ಲಿ ವೀಕೆಂಟ್ ಕಾರ್ಯಕ್ರದಲ್ಲಿ ಸುದೀಪ್ ನಿರೂಪಣೆ ಇರಲ್ಲ ಎಂದು ಹೇಳಲಾಗಿತ್ತು. ಹಾಗಾಗಿ ಈ ವಾರ ಎಲಿಮಿನೇಷನ್ ಪ್ರಕ್ರಿಯೆ ನಡೆಯೋದಿಲ್ಲ ಎಂದು ಊಹಿಸಲಾಗಿತ್ತು. ಆದರೆ ಸುದೀಪ್ ಅನುಪಸ್ಥಿತಿಯಲ್ಲಿ ಈ ವಾರ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು ನಟಿ ಮಯೂರಿ ದೊಡ್ಮನೆಯಿಂದ ಹೊರ ನಡೆದಿದ್ದಾರೆ. ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಭಾರತ, ಪಾಕಿಸ್ತಾನ ಕ್ರಿಕೇಟ್ ಪಂದ್ಯ ವೀಕ್ಷಿಸಲು ಸುದೀಪ್ ಪತ್ನಿ ಪ್ರಿಯಾ ಜೊತೆ ತೆರಳಿದ್ದರು. ಹೀಗಾಗಿ ಈ ವಾರದ ಬಿಗ್ ಬಾಸ್ ನಿರೂಪಣೆಗೆ ಹಾಜರಾಗಲು ಸುದೀಪ್ ಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ವಾರ ಎಲಿಮಿನೇಷನ್ ಪ್ರಕ್ರಿಯ ಇಲ್ಲ ಎನ್ನಲಾಗಿತ್ತು. ಆದರೆ ಅಚ್ಚರಿಯ ರೀತಿಯಲ್ಲಿ ಮಯೂರಿ ಮನೆಯಿಂದ ಹೊರ ಬಂದಿದ್ದಾರೆ. ಧಾರವಾಹಿ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ಮಯೂರಿ ಆ ಬಳಿಕ ಸಿನಿಮಾದಲ್ಲೂ ಸಾಕಷ್ಟು ಖ್ಯಾತಿ ಘಳಿಸಿದ್ದರು. ಸಾಕಷ್ಟು ಆಫರ್ ಗಳು ಬರುತ್ತಿರುವ ಸಮಯದಲ್ಲೇ ಮಯೂರಿ ಹಸೆಮಣೆ ಏರಿದ್ದರು. ಮಗುವಾದ ಬಳಿಕ ಚಿತ್ರರಂಗದಿಂದ ದೂರವಿದ್ದ ಮಯೂರಿ ಮಗನ ಲಾಲನೆ, ಪಾಲನೆಯಲ್ಲಿ ತೊಡಗಿಕೊಂಡಿದ್ದರು. ಬಿಗ್ ಬಾಸ್ ಆಫರ್ ಬಂದಾಗ ಸಾಕಷ್ಟು ಯೋಜಿಸಿ ದೊಡ್ಮನೆ ಒಳಗೆ ಕಾಲಿಟ್ಟಿದ್ದರು. ಒಂದೂವರೆ ವರ್ಷದ ಮಗುವನ್ನು ಬಿಟ್ಟು ಹೋಗಿದ್ದರು. ಆದರೆ ಇದೀಗ ದೊಡ್ಮನೆಯಿಂದ ಹೊರ ಬಂದಿದ್ದಾರೆ. ವೀಕೆಂಡ್ ನಲ್ಲಿ ನೇಹಾ ಮತ್ತು ಮಯೂರಿ ನಡುವೆ ಜಟಾಪಟಿ ಇತ್ತು. ಆ ಪೈಕಿ ಮಯೂರಿ ಔಟ್ ಆದರು. ಸದಾ ಮಗುವಿನ ಚಿಂತೆಯಲ್ಲಿ ಇರುತ್ತಿದ್ದ‌‌ ಮಯೂರಿ ಇದೀಗ ಮನೆಯಿಂದ ಔಟ್ ಆಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now