ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ವಸಿಷ್ಠ ಸಿಂಹನ ಸಿನಿಮಾಗೆ ಎಂಟ್ರಿಕೊಟ್ಟ ಮಾಸ್ಟರ್ ಆನಂದ್ ಮಗಳು ವಂಶಿಕಾ
ಈಗಾಗ್ಲೆ 50% ಲವ್ ಲಿ ಸಿನಿಮಾದ ಶೂಟಿಂಗ್ ಮುಗಿದಿದೆ. ಚಿತ್ರದಲ್ಲಿ ವಸಿಷ್ಠ ಸಿಂಹಗೆ ಜೋಡಿಯಾಗಿ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ಬಣ್ಣ ಹಚ್ಚುತ್ತಿದ್ದಾರೆ. ಈಗಾಗ್ಲೆ ರಿಯಾಲಿಟಿ ಶೋ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ವಂಶಿಕಾಗೆ ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಪಾತ್ರ ಸೃಷ್ಟಿಸಿದ್ದು ನೋಡುಗರನ್ನು ವಂಶಿಕಾ ರಂಜಿಸುತ್ತಾಳೆ ಎನ್ನುವ ಭರವಸೆ ನೀಡಿದ್ದಾರೆ ನಿರ್ದೇಶಕ ಚೇತನ್ ಕೇಶವ್.
ಈ ಹಿಂದೆ ಶ್ರೀಮುರುಳಿ ನಟನೆಯ ಮಫ್ತಿ ಚಿತ್ರಕ್ಕೆ ನಿರ್ದೇಶನ ಮಾಡಿರುವ ನರ್ತನ್ ಜೊತೆ ಕೆಲಸ ಮಾಡಿರುವ ಚೇತನ್ ಕೇಶವ್ ಇದೀಗ ನಿರ್ದೇಶನಕ್ಕೆ ಇಳಿದಿದ್ದಾರೆ. ಲವ್ ಮಿ ಸಿನಿಮಾದಲ್ಲಿ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಇದ್ದು ರೌಡಿಸಂ ಜೊತೆಗೆ ಆ್ಯಕ್ಷನ್ ರೋಮ್ಯಾಂಟಿಕ್ ಪ್ರೇಮ ಕಥಾಹಂದರ ಕೂಡ ಸಿನಿಮಾ ಹೊಂದಿದೆ.
