ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬಿಡುಗಡೆ ಹೊಸ್ತಿಲಲ್ಲಿ ತಂಪ್ಪೆರೆಯಲು ಬಂತು ಮಾನ್ಸೂನ್ ರಾಗದ ಮತ್ತೊಂದು ಟ್ರೈಲರ್
ಕೇವಲ 57 ಸೆಕೆಂಟ್ ನ ರಿಲೀಸ್ ಟ್ರೈಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಪಂಚಿಂಗ್ ಡೈಲಾಗ್ ನಿಂದ ಕೂಡಿರುವ ಮಾನ್ಸೂನ್ ರಾಗ ಸಿನಿಮಾದ ಟ್ರೈಲರ್ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುವಂತೆ ಮಾಡಿದೆ. ಅಲ್ಲದೆ ಹತ್ತು ಜನರ ಕೈಕೆಳಗೆ ಜವಾನನಾಗಿ ಕೆಲಸ ಮಾಡುವವನನ್ನೂ ಯಜಮಾನ ಎನ್ನುವ ಏಕೈಕ ಜೀವ ಹೆಂಡತಿ ಎಂದು ನಟ ಅಚ್ಯುತ್ ಕುಮಾರ್ ಹೇಳಿರುವ ಡೈಲಾಗ್ ಟ್ರೈಲರ್ ನಲ್ಲಲಿ ಸಖತ್ ಹೈಲೈಟ್ ಆಗಿದೆ.
ಡಾಲಿ ಧನಂಜಯ್ ಪ್ರೇಮಿಯಾಗಿ ಕಾಣಿಸಿಕೊಂಡಿದ್ರೆ ನಟಿ ರಚಿತಾ ರಾಮ್ ವೇಶ್ಯೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಹಿಂದೆ ಚಿತ್ರತಂಡ ಬಿಡುಗಡೆ ಮಾಡಿದ್ದ ಟ್ರೈಲರ್ ಗೆ ಹೋಲಿಸಿದ್ರೆ ಇದೀಗ ಬಿಡುಗಡೆ ಆಗಿರೋ ಟ್ರೈಲರ್ ಕೊಂಚ ಸಪ್ಪೆ ಎನಿಸದೆ ಇರಲಾರದು.
ತನ್ನ ವಿಭಿನ್ನ ಟೀಸರ್ ಹಾಗೂ ಹಾಡಿನ ಮೂಲಕವೇ ಸಿನಿಪ್ರಿಯರ ಗಮನ ಸೆಳೆದಿರುವ ಮಾನ್ಸೂನ್ ರಾಗ ಸಿನಿಮಾವನ್ನು ಪುಷ್ಪಕವಿಮಾನ ಖ್ಯಾತಿಯ ರವೀಂದ್ರನಾಥ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ವಿಖ್ಯಾತ್ ಎ.ಆರ್. ಅವರು ಬಂಡವಾಳ ಹೂಡಿದ್ದಾರೆ.
ಡಾಲಿ ಧನಂಜಯ್, ರಚಿತಾ ರಾಮ್ ಜೊತೆಗೆ ಯಶಾ ಶಿವಕುಮಾರ್, ಅಚ್ಯುತ್ ಕುಮಾರ್, ಸುಹಾನಿಸಿ ಮಣಿರತ್ನಂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದು ಅನುಪ್ ಸಿಳಿನ್ ಸಂಗೀತ ನೀಡಿದ್ದಾರೆ. ಇದೇ ಶುಕ್ರವಾರ ಮಾನ್ಸೂನ್ ರಾಗ ತೆರೆ ಕಾಣಲಿದೆ.
