• March 14, 2026

ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಪಬ್ಲಿಕ್ ನಲ್ಲೇ ಕೆನ್ನೆಗೆ ಭಾರಿಸಿದ ಸ್ಟಾರ್ ನಟಿ

ಸಿನಿಮಾ ನಟಿಯರಿಗೆ ಪಬ್ಲಿಕ್ ಪ್ಲೇಸ್ ನಲ್ಲಿ ಕೆಲವೊಮ್ಮೆ ಅನುಚಿತ ವರ್ತನೆಗಳು ಎದುರಾಗೋದು ಸಾಮಾನ್ಯ. ಅಂತೆಯೇ ಮಲಯಾಳಂ ಸ್ಟಾರ್ ನಟಿ ಸಾನಿಯಾ ಐಯ್ಯಪ್ಪನ್ ಜೊತೆ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೋರ್ವ ಅನುಚಿತವಾಗಿ ವರ್ತಿಸಿದ್ದಾನೆ. ಸ್ಯಾಟರ್ಡೆ ನೈಟ್ ಸಿನಿಮಾದ ಪ್ರಮೋಷಯ್ ಕೆಲಸದಲ್ಲಿ ತೊಡಗಿಕೊಂಡಿರುವ ನಟಿಗೆ ವ್ಯಕ್ತಿಯೋರ್ವ ಅನುಚಿತವಾಗಿ ವರ್ತಿಸಿದ್ದು ಆತನಿಗೆ ನಟಿ ಕಪಾಳ ಮೋಕ್ಷ ಮಾಡಿದ್ದಾರೆ. ಮಾಲಯಾಳಂ ಸಿನಿಮಾ ರಂಗದಲ್ಲಿ ಸಾಕಷ್ಟು ಖ್ಯಾತಿ ಘಳಿಸಿರುವ ಸಾನಿಯಾ ಐಯ್ಯಪ್ಪನ್ ನಟನೆಯ `ಸ್ಯಾಟರ್ಡೆ ನೈಟ್’ ಚಿತ್ರ ಇದೀಗ ರಿಲೀಸ್‌ಗೆ ರೆಡಿಯಿದೆ. ಕೇರಳದ ವಿವಿಧ ಕಡೆ ಚಿತ್ರಕ್ಕೆ ಭರ್ಜರಿ ಪ್ರಚಾರ ನಡೆಸಲಾಗುತ್ತಿದೆ. ಈ ವೇಳೆ ಚಿತ್ರತಂಡ ಕ್ಯಾಲಿಕಟ್‌ನ ಮಾಲ್‌ವೊಂದರಲ್ಲಿ ಪ್ರಚಾರಕ್ಕೆ ತೊರಳಿದ್ದು, ಈ ವೇಳೆ ಭಾರಿ ಸಂಖ್ಯೆಯ ಜನ ಹಾಜರಿದ್ದರು. ಈ ವೇಳೆ ಸಾನಿಯಾ ಮತ್ತು ಆಕೆಯ ಸಹನಟಿಯ ಜೊತೆ ಅಭಿಮಾನಿಯೊಬ್ಬ ಅನುಚಿತವಾಗಿ ವರ್ತಿಸಿದ್ದಾನೆ. ಸಾಕಷ್ಟು ನೂಕಾಟದ ನಡುವೆ ವ್ಯಕ್ತಿಯೋರ್ವ ಸಾನಿಯಾರ ಮೈ ಮುಟ್ಟಿದ್ದಾನೆ. ಸಾನಿಯಾ ಸಹನಟಿಗೂ ಇದೇ ಅನುಭವ ಆಗಿದೆ. ಕೂಡಲೇ ಸಾನಿಯಾ ಆತನ ಕಪಾಳಕ್ಕೆ ಹೊಡೆದಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಘಟನೆಯ ಕುರಿತು ಸಾನಿಯಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ಸಾನಿಯಾ ದೈರ್ಯವನ್ನು ಸಾಕಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಸಾನಿಯಾ ಪೋಸ್ಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now