ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮಲಯಾಳಂ ಚಿತ್ರರಂಗದ ಖ್ಯಾತ ನಟ 37 ವರ್ಷದ ಶರತ್ ಚಂದ್ರನ್ ನಿಧನರಾಗಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲೇ ಶರತ್ ಚಂದ್ರನ್ ಮೃತಪಟ್ಟಿದ್ದು ಶರತ್ ಸಾವಿಗೆ ಸಿನಿ ರಂಗ ಕಂಬನಿ ಮಿಡಿದಿದೆ.
‘ಅಂಗಮಾಲಿ ಡೈರೀಸ್’ ಸಿನಿಮಾದ ಮೂಲಕ ಜನಪ್ರಿಯತೆ ಘಳಿಸಿದ್ದ ಶರತ್ ಚಂದ್ರನ್ ನಾಯಕನ ಜೊತೆಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಖ್ಯಾತಿ ಘಳಿಸಿದ್ದರು. ನಟ ಆ್ಯಂಟನಿ ಶರತ್ ನಿಧನದ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತಪಡಿಸಿದ್ದು ಯುವ ನಟನ ನಿಧನಕ್ಕೆ ಸಾಕಷ್ಟು ಮಂದಿ ಕಂಬನಿ ಮಿಡಿದಿದ್ದಾರೆ. ಶರತ್ ಚಂದ್ರನ್ ಸಾವಿಗೆ ಕಾರಣ ಏನು ಅನ್ನೋದು ಇನ್ನೂ ತಿಳಿದು ಬಂದಿಲ್ಲ.
