• January 2, 2026

ಮಹಾಲಕ್ಷ್ಮೀ, ರವೀಂದರ್ ಟೆಂಪಲ್ ರನ್: ಸುಖಿ ದಾಂಪತ್ಯಕ್ಕೆ ದೇವರ ಮೊರೆ ಹೋದ ಜೋಡಿ

ತಮಿಳು ಕಿರುತೆರೆ ನಟಿ ಮಹಾಲಕ್ಷ್ಮೀ ಹಾಗೂ ನಿರ್ಮಾಪರ ರವೀಂದರ್ ಮದುವೆಯ ಬಳಿಕ ನಿತ್ಯ ಒಂದಲ್ಲ ಒಂದು ವಿಷಯಕ್ಕೆ ಸದ್ದು ಮಾಡ್ತಿದ್ದಾರೆ. ಮದುವೆಯ ಬಳಿಕ ಟೆಂಪಲ್ ರನ್ ಮಾಡ್ತಿರೋ ಜೋಡಿಗಳು ಇದೀಗ ತಿರುಚೆಂಡೂರ್ ಮುರುಗನ್ ದೇವಸ್ಥಾನಕ್ಕೆ ಭೇಟಿ ಕೊಟ್ಟು ಮುರುಗನ್ ದೇವರ ಆಶೀರ್ವಾದ ಪಡೆದಿದ್ದಾರೆ. ಮದುವೆಯ ಬಳಿಕ ಮನೆ ದೇವರ ದೇವಸ್ಥಾನಕ್ಕೆ ತೆರಳಿ ದೇವರ ಆಶೀರ್ವಾದ ಪಡೆದಿದ್ದ ಜೋಡಿಗಳು ಇದೀಗ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ತಮ್ಮ ವೈಹಿವಾಹಿಕ ಜೀವನ ಚೆನ್ನಾಗಿರಲಿ ಎಂದು ಅವರು ದೇವರಿಗೆ ಮೊರೆ ಹೋಗಿದ್ದಾರೆ. ಅಲ್ಲದೇ, ತಾವಷ್ಟೇ ಅಲ್ಲ, ಇತರರಿಗೆ ದೇವರು ಒಳ್ಳೆದು ಮಾಡಲಿ ಎಂದು ಬೇಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಸಾಕಷ್ಟು ನೆಗೆಟೀವ್ ಕಾಮೆಂಟ್ ಗಳು ಬಂದಿದ್ದವು. ನೆಗಟೀವ್ ಜೋಡಿ ಎಂದು ಟ್ರೋಲ್ ಮಾಡಲಾಗಿತ್ತು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಮಹಾಲಕ್ಷ್ಮೀ ಹಾಗೂ ರವೀಂದರ್ ಹೊಸ ಜೀವನ ಎಂಜಯ್ ಮಾಡ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now