ಮಹಾಲಕ್ಷ್ಮಿ ಲೇಔಟ್‍ನ 55ನೇ ವಾರ್ಡ್‍ಗೆ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೆಸರಿಟ್ಟಿರೋದು ಸಂತೋಷ ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ನ ಶಂಕರಮಠ ವಾರ್ಡ್‍ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಬೊಮ್ಮಾಯಿ, ವಾರ್ಡ್ ಗೆ ಪುನೀತ್ ರಾಜ್ ಕುಮಾರ್ ಹೆಸರನ್ನು ಇಟ್ಟಿರೋದು ಸಾಕಷ್ಟು ಖುಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದಿರು.
ಪಾಲಿಕೆಯ ಯಾವುದಾದರೂ ಒಂದು ವಾರ್ಡ್‍ಗೆ ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಅವರ ಹೆಸರಿಡಿ ಎಂದು ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕಿ ಭಾಗ್ಯವತಿ ಅಮರೇಶ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ಮನವಿ ಮಾಡಿ ಪತ್ರ ಬರೆದಿದ್ದರು. ಅಮೋಘ ಅಭಿನಯ ಮತ್ತು ಸಾಮಾಜಿಕ ಕಳಕಳಿಯಿಂದ ಜನರ ಮನಸ್ಸು ಗೆದ್ದಿರುವ ಪುನೀತ್ ಹೆಸರು ಅಜರಾಮರವಾಗಿರಬೇಕಾದರೆ ಅವರ ಹೆಸರನ್ನು ಯಾವುದಾದರೂ ಒಂದು ವಾರ್ಡ್‍ಗೆ ಇಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಭಾಗ್ಯವತಿ ಅಮರೇಶ್ ಅವರ ಮನವಿಗೆ ಸ್ಪಂದಿಸಿದ್ದ ಮುಖ್ಯಮಂತ್ರಿಗಳು ಮಹಾಲಕ್ಷ್ಮಿ ಲೇಔಟ್ ನ 55ನೇ ವಾರ್ಡ್ ಗೆ ಪುನೀತ್ ಹೆಸರಿಡಲು ಸಮ್ಮತಿ ಸೂಚಿಸಿದ್ದರು.