ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮಹಾಭಾರತ ಖ್ಯಾತಿಯ ನಟ ರಸಿಕ್ ದವೆ ನಿಧನ
65 ವರ್ಷ ವಯಸ್ಸಿನ ರಸಿಕ್ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ರಸಿಕ್ ನಿಧನರಾಗಿದ್ದಾರೆ. ರಸಿಕ್ ಅವರ ಪತ್ನಿ ನಟಿ ಕೇತಕಿ ದೇವಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇಂದು ಅಂತ್ಯಕ್ರಿಯೆ ನಡೆಯಲಿದೆ.
ಗುಜರಾತಿಯ ಸೀರಿಯಲ್ `ಪುತ್ರವಧು’, `ನಚ್ ಬಲಿಯೇ’ ಡ್ಯಾನ್ಸಿಂಗ್ ಸ್ಟಾರ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ರಸಿಕ್ ಅವರಿಗೆ, ಮಹಾಭಾರತ ಸೀರಿಯಲ್ ಸಾಕಷ್ಟು ಖ್ಯಾತಿ ತಂದುಕೊಟ್ಟಿತ್ತು. ರಸಿಕ್ ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದೆ.
