ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪರಭಾಷೆಗೆ ಹೊರಟ ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾ
ಲವ್ 360 ಸಿನಿಮಾ ತೆಲುಗು ಹಾಗೂ ತಮಿಳು ಭಾಷೆಗೆ ರಿಮೇಕ್ ಆಗುತ್ತಿರುವ ಬಗ್ಗೆ ಚಿತ್ರತಂಡದಿಂದ ಮಾಹಿತಿ ಹೊರ ಬಂದಿದೆ. ಖ್ಯಾತ ನಿರ್ಮಾಣ ಸಂಸ್ಥೆಯೊಂದು ಈ ಸಿನಿಮಾವನ್ನು ತೆಲುಗು ಹಾಗೂ ತಮಿಳು ಭಾಷೆಗೆ ರಿಮೇಕ್ ಮಾಡಲು ಮುಂದೆ ಬಂದಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರ ಬರಬೇಕಿದೆ.
ರಚನಾ ಇಂದರ್ ಹಾಗೂ ಪ್ರವೀಣ್ ನಟನೆಯ ಮುಗ್ದ ಪ್ರೇಮ ಕಥೆ ಹೊಂದಿದ್ದ ಲವ್ 360 ಸಿನಿಮಾಗೆ ಸಿನಿ ರಸಿಕರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಅದರಲ್ಲೂ ಈ ಸಿನಿಮಾದ ಜಗವೇ ನೀನು ಗೆಳತಿಯೇ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಯುಟ್ಯೂಬ್ ನಲ್ಲಿ 1.5ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡು ಕೇಳುಗರ ಮನ ಗೆದ್ದಿತ್ತು. ಲವ್ ಸ್ಟೋರಿ ನೋಡಲು ಬಂದ ಪ್ರೇಕ್ಷಕರಿಗೆ ಮರ್ಡರ್ ಮಿಸ್ಟ್ರಿರಿ ಕಥೆ ಅಚ್ಚರಿ ಮೂಡಿಸಿತ್ತು. ಈ ಸಿನಿಮಾಗೆ ಪರಭಾಷೆಯ ಮಂದಿಗೂ ಮೆಚ್ಚುಗೆ ಸೂಚಿಸಿದ್ದು ಇದೀಗ ಪರಭಾಷೆಗೆ ರಿಮೇಕ್ ಆಗುತ್ತಿದೆ.
