ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನನ್ನನ್ನೇ ಟಾರ್ಗೆಟ್ ಮಾಡಲಾಗುತ್ತಿದೆ: ದಿಲ್ ರಾಜು ಬಗ್ಗೆ ಯಾರು ಮಾತನಾಡಲ್ಲ, ಲೈಗರ್ ವಿತರಕ
ಮೂಲಗಳ ಪ್ರಕಾರ ಶ್ರೀನು ಲೈಗರ್ ಸಿನಿಮಾದಿಂದ 100 ಕೋಟಿ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀನು 100 ಕೋಟಿ ಲಾಸ್ ಆಗಿದೆ ಅನ್ನೋದು ಸುಳ್ಳು. ಆದರೆ ಲೈಗರ್ ಸಿನಿಮಾಗೆ ಹೂಡಿದ್ದ ಹಣದಲ್ಲಿ ಸುಮಾರು 65% ನಷ್ಟ ಆಗಿದೆ ಎಂದಿದ್ದಾರೆ.
ಅಂದಹಾಗೆ ಟಾಲಿವುಡ್ ವಿತರಕರ ವಲಯದಲ್ಲಿ ವಾರಂಗಲ್ ಶ್ರೀನು ಹಾಗೂ ದಿಲ್ ರಾಜು ಹೆಸರು ದೊಡ್ಡ ಮಟ್ಟದಲ್ಲಿ ಚಾಲ್ತಿಯಲ್ಲಿದೆ. ಈ ಇಬ್ಬರ ನಡುವೆ ಸಾಕಷ್ಟು ಪೈಪೋಟಿ ನಡೆಯುತ್ತಿರುತ್ತದೆ. ಲೈಗರ್ ಸಿನಿಮಾದಿಂದ ವಾರಂಗಲ್ ಶ್ರೀನು ನಷ್ಟ ಅನುಭವಿಸಿದ್ದಾರೆ ಎಂದು ಮಾದ್ಯಮಗಳಲ್ಲಿ ವರದಿಯಾಗುತ್ತಿದಂತೆ, ‘ನನ್ನನ್ನು ಕಾರಣವಿಲ್ಲದೆ ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ ಯಾರೊಬ್ಬರು ದಿಲ್ ರಾಜುಗೆ ಆದ ನಷ್ಟಗಳ ಬಗ್ಗೆ ಬರೆಯೋದೇ ಇಲ್ಲ’ ಎಂದಿದ್ದಾರೆ.
