ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ‘ಲೈಫ್ ಈಸ್ ಸಿಂಪಲ್’ ಸಾಂಗ್
ಮೂಲತಃ ಸೋಮವಾರಪೇಟೆಯವರಾದ ವಿವೇಕ್ ರಾಚಪ್ಪ ಡಿಪ್ಲೋಮ ಇನ್ ಏರೋನಾಟಿಕಲ್ ಇಂಜಿನಿಯರಿಂಗ್ ಓದಿಕೊಂಡಿದ್ದಾರೆ. ಬಾಲ್ಯದಿಂದಲೂ ಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಇವರು ವೃತ್ತಿಯಲ್ಲಿ ಹೆಚ್ ಆರ್ ಆಗಿದ್ದು ಪ್ರವೃತ್ತಿಯಲ್ಲಿ ರ್ಯಾಪ್ ಸಿಂಗರ್ ಆಗಿ ಗಮನ ಸೆಳೆಯುತ್ತಿದ್ದಾರೆ. ಸದ್ಯ ಕೆಲಸದ ಜೊತೆಗೆ ಪ್ಯಾಶನ್ ಫಾಲೋ ಮಾಡುತ್ತಿರುವ ವಿವೇಕ್ ರಾಚಪ್ಪ ಮುಂದೆ ಪೂರ್ಣ ಪ್ರಮಾಣದಲ್ಲಿ ತಮ್ಮ ಪ್ಯಾಶನ್ ಕಡೆ ತೊಡಗಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದಾರೆ.
ಅಂದ್ಹಾಗೆ ಲೈಫ್ ಈಸ್ ಸಿಂಪಲ್ ಇವರು ರಚಿಸಿರುವ ಐದನೇ ಹಾಡಾಗಿದ್ದು, ಇದಕ್ಕೂ ಮೊದಲು ನನ್ನ ಕನಸಲಿ, ಬಾ ಕುಣಿಯುವ ಬಾ, ಜೋಕೆ, ಹೊಸ ಪರಿಣಿತಿ ಹಾಡುಗಳು ಬಿಡುಗಡೆಯಾಗಿ ಜನಪ್ರಿಯಗೊಂಡಿವೆ. ಲೈಫ್ ಈಸ್ ಸಿಂಪಲ್ ಹಾಡಿಗೆ ತಾವೇ ಸಾಹಿತ್ಯ ಬರೆದು ಸಂಗೀತ ನೀಡಿ, ಹಾಡಿದ್ದಾರೆ. ಕ್ವಾಡ್ ಕೋರ್ ಮೀಡಿಯಾ ಹೌಸ್ ಬ್ಯಾನರ್ ನಲ್ಲಿ ಈ ಸಾಂಗ್ ನಿರ್ಮಾಣವಾಗಿದೆ.
