• June 17, 2026

ಲೆಂಡ್ಲ್ ಸಿಮನ್ಸ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ವೆಸ್ಟ್ ಇಂಡೀಸ್ ಆರಂಭಿಕ ಆಟಗಾರ ಲೆಂಡ್ಲ್ ಸಿಮನ್ಸ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ. 37 ಹರೆಯದ ಕ್ರಿಕೆಟಿಗ ಟ್ವಿಟರ್ನಲ್ಲಿ ಕುರಿತು ಘೋಷಣೆ ಮಾಡಿದ್ದಾರೆ.   ಸಿಮನ್ಸ್ ತಮ್ಮ 16 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 8 ಟೆಸ್ಟ್, 68 ಏಕದಿನ ಮತ್ತು 68 ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ, ಎಲ್ಲಾ ಮೂರು ರೂಪಗಳಲ್ಲಿ ಒಟ್ಟು 3763 ರನ್ ಗಳಿಸಿದ್ದಾರೆ. 2006ರಲ್ಲಿ ಫೈಸಲಾಬಾದ್ನಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಏಕದಿನ ಪಂದ್ಯವನ್ನಾಡಿದ್ದರು. ಅವರು ಎರಡು ಶತಕಗಳು ಸೇರಿದಂತೆ ಏಕದಿನ ಪಂದ್ಯಗಳಲ್ಲಿ ಒಟ್ಟು 1958 ರನ್ ಗಳಿಸಿದರು ಸಿಮನ್ಸ್ ಅವರು ಫ್ರಾಂಚೈಸಿ ಕ್ರಿಕೆಟ್ ಆಡುವುದನ್ನು ಮುಂದುವರಿಸುವುದಾಗಿ ತಮ್ಮ ಪೋಸ್ಟ್ನಲ್ಲಿ ಖಚಿತಪಡಿಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now