ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಅಕ್ಷಯ್ ಕುಮಾರ್ ರನ್ನು ದೇಶದಿಂದ ಓಡಿಸುವೆ: ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ
ಅಕ್ಷಯ್ ಕುಮಾರ್ ರಾಮ ಸೇತು ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಆಲ್ ಮೋಸ್ಟ್ ಕಂಪ್ಲೀಟ್ ಆಗಿದ್ದು ಸದ್ಯದಲ್ಲೇ ಸಿನಿಮಾ ತೆರೆಗೆ ಬರೋಕೆ ಸಿದ್ದವಾಗಿದೆ. ಈ ಚಿತ್ರದಲ್ಲಿ ರಾಮ ಸೇತು ಕುರಿತು ತಪ್ಪು ಮಾಹಿತಿಯನ್ನು ನೀಡಲು ಚಿತ್ರತಂಡ ಮುಂದಾಗಿದೆ ಎಂದು ಸುಬ್ರಮಣಿಯನ್ ಆರೋಪಿಸಿದ್ದಾರೆ. ಸಿನಿಮಾದ ಪೋಸ್ಟರ್ ನಲ್ಲಿ ಸುಪ್ರೀಂ ಕೋರ್ಟ್ ನ 2007ರ ಆದೇಶದ ಪ್ರತಿಯನ್ನು ಬಳಸಿಕೊಳ್ಳಲಾಗಿದೆಯಂತೆ. ಈ ಆದೇಶವು ಸ್ವಾಮಿ ಅವರು ಹೂಡಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದು ಆಗಿದೆ. ಹಾಗಾಗಿ ಅನುಮತಿ ಇಲ್ಲದೇ ಅದನ್ನೂ ಬಳಸಿಕೊಂಡಿದ್ದಕ್ಕೆ ಅವರು ಗರಂ ಆಗಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ‘ರಾಮ ಸೇತು ಸಿನಿಮಾದ ಹಕ್ಕುಗಳಿಗೆ ಸಂಬಂಧಿಸಿದಂತೆ ನಾನು ಅಕ್ಷಯ್ ಕುಮಾರ್ ಮತ್ತು ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಕಾಮ್ರಾ ಮೀಡಿಯಾ ಮೇಲೆಯೂ ಪ್ರಕರಣ ದಾಖಲಿಸಲು ಸಿದ್ಧತೆ ಮಾಡಿಕೊಂಡಿದ್ದೇನೆ. ರಾಮ ಸೇತುವೆ ಬಗ್ಗೆ ತಪ್ಪು ಮಾಹಿತಿಯನ್ನು ಕೊಡುವುದಕ್ಕೆ ನಾನು ಬಿಡುವುದಿಲ್ಲ. ಅಕ್ಷಯ್ ಕುಮಾರ್ ಭಾರತದ ಪ್ರಜೆಯಲ್ಲ, ಅವರು ಕೆನಡಾದ ಪೌರತ್ವ ಹೊಂದಿದ್ದಾರೆ. ಹಾಗಾಗಿ ಅವರಿಗೆ ಇತಿಹಾಸದ ಅರಿವಿಲ್ಲ ಎಂದೂ ಟ್ವಿಟ್ ಮಾಡಿದ್ದಾರೆ.
