ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮತ್ತೆ ಸುದ್ದಿಯಾದ ಸುಷ್ಮಿತಾ ಸೇನ್, ಲಲಿತ್ ಮೋದಿ: ಮಾಜಿ ವಿಶ್ವಸುಂದರಿ ಲುಕ್ ಗೆ ಕ್ಲೀನ್ ಬೋಲ್ಡ್ ಆದ ಲಲಿತ್
ನಿತ್ಯ ಒಂದಲ್ಲ ಒಂದು ರೀತಿಯ ಟ್ರೋಲ್ ಗೆ ಒಳಗಾಗುತ್ತಿರುವ ಸುಷ್ಮಿತಾ ಇವುಗಳಿಂದ ರಿಲ್ಯಾಕ್ಸ್ ಪಡೆದುಕೊಳ್ಳಲು ಇಟಲಿ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ಕೆಲವು ಫೊಟೋ ಮತ್ತು ವಿಡಿಯೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಸುಷ್ಮಿತಾ ಸೇನ್ ಹಂಚಿಕೊಂಡಿದ್ದಾರೆ. ಸುಷ್ಮಿತಾ ಹಂಚಿಕೊಂಡಿರುವ ವಿಡಿಯೋದಲ್ಲಿ ಸುಷ್ಮಿತಾ ಈಜುಡುಗೆಯಲ್ಲಿ ಸಮುದ್ರಕ್ಕೆ ಜಂಪ್ ಮಾಡುತ್ತಿರುವ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.
ಈ ವಿಡಿಯೋವನ್ನು ಸುಷ್ಮಿತಾ ಸೇನ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಂತೆಯೆ ಲಲಿತ್ ಮೋದಿ ಅದಕ್ಕೆ ಕಾಮೆಂಟ್ ಮಾಡಿದ್ದಾರೆ. ಲುಕ್ಕಿಂಗ್ ಹಾಟ್ ಎಂದು ಬರೆದಿದ್ದಾರೆ. ಈ ಬರಹ ಇದೀಗ ಚರ್ಚೆಗೆ ಕಾರಣವಾಗಿದೆ. ಸುಷ್ಮಿತಾ ಸೇನ್ ಜೊತೆ ಇವರಿಗಿದ್ದ ಪ್ರೇಮವನ್ನು ಈ ರೀತಿಯಲ್ಲಿನ ಹೇಳಿದ್ದಾರೆ ಎಂದು ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ.
