ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸಮಂತಾ ಅನಾರೋಗ್ಯದಿಂದ ಭಗ್ನವಾಯ್ತು ವಿಜಯ್ ದೇವರಕೊಂಡ ಕನಸು
ಸಮಂತಾ ಅವರಿಗೆ ಸ್ನಾಯು ಸೆಳೆತ ಹಾಗೂ ಚರ್ಮದ ಅಲರ್ಜಿ ಇರುವ ಕಾರಣಕ್ಕೆ ಟ್ರೀಟ್ ಮಂಟ್ ಗಾಗಿ ಅಮೆರಿಕಕ್ಕೆ ತೆರಳಿದ್ದರು.ಹೀಗಾಗಿ ಸಮಂತಾ ಅವರಿಗೆ ಸಾಕಷ್ಟು ವಿಶ್ರಾಂತಿಯ ಅಗತ್ಯವಿದೆ. ಇತ್ತೀಚೆಗೆ ಡ್ರಿಪ್ ಹಾಕಿಕೊಂಡೇ ಸಮಂತಾ ‘ಯಶೋದ’ ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದರು. ಹೀಗಾಗಿ ಸದ್ಯಕ್ಕಂತೂ ಅವರ ‘ಖುಷಿ’ ಚಿತ್ರದ ಕೆಲಸ ಪೂರ್ಣಗೊಳ್ಳಲ್ಲ ಎನ್ನಲಾಗುತ್ತಿದೆ. ಹೀಗಾಗಿ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿದೆ.
ಸಿನಿಮಾ ರಿಲೀಸ್ ಡೇಟ್ ಮುಂದೂಡಲ್ಪಟ್ಟ ಬಗ್ಗೆ ವಿಜಯ್ ದೇವರಕೊಂಡ ಮಾಹಿತಿ ನೀಡಿದ್ದಾರೆ. ‘ನಾವು ಶೇ.60 ಶೂಟಿಂಗ್ ಪೂರ್ಣಗೊಳಿಸಿದ್ದೀವಿ. ಆರಂಭದಲ್ಲಿ ಚಿತ್ರವನ್ನು ಡಿಸೆಂಬರ್ನಲ್ಲೇ ರಿಲೀಸ್ ಮಾಡುವ ಪ್ಲ್ಯಾನ್ ಇತ್ತು. ಆದರೆ, ಹಲವು ಕಾರಣದಿಂದ ಚಿತ್ರ ಫೆಬ್ರವರಿಗೆ ಮುಂದೂಡಲ್ಪಟ್ಟಿದೆ’ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.
