• January 2, 2026

ಕೊಡಿ ಬಿದ್ದ ಯಶ್ ಅಭಿವೃದ್ಧಿ ಪಡಿಸಿದ ತಲ್ಲೂರು ಕೆರೆ: ಗ್ರಾಮಸ್ಥರಲ್ಲಿ ಮನೆ ಮಾಡಿದ ಸಂಭ್ರಮ

ಕೊಪ್ಪಳ: ರಾಕಿಂಗ್ ಸ್ಟಾರ್ ಯಶ್ ಅಭಿವೃದ್ಧಿ ಪಡಿಸಿದ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆ ಕೋಡಿ ಬಿದ್ದಿದೆ ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ತಲ್ಲೂರು ಕೆರೆ ತುಂಬಿಕೊಂಡಿದೆ. ಈ ಗ್ರಾಮದಲ್ಲಿ ನೀರಿನ ಸಮಸ್ಯೆಉಂಟಾದ ಸಂದರ್ಭದಲ್ಲಿ2017ರ ವೇಳೆ ಯಶೋಮಾರ್ಗ ಫೌಂಡೇಶನಿಂದ ಕೆರೆ ಅಭಿವೃದ್ಧಿ ಮಾಡಲಾಗಿತ್ತು. ಅಭಿವೃದ್ದಿಯಾದ ಬಳಿಕ ಇದೇ ಮೊದಲ ಭಾರಿಗೆ ಕೆರೆ ಕೋಡಿ ಬಿದ್ದಿದ್ದು ಗ್ರಾಮಸ್ಥರು ಹರ್ಷಗೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಯಶೋಮಾರ್ಗ, ಯಶೋಮಾರ್ಗದ ಮಹತ್ವದ ಯೋಜನೆಯಾಗಿದ್ದ ತಲ್ಲೂರು ಕೆರೆಯ ತುಂಬಾ ನೀರು ಬಂದಿದ್ದು ನೋಡಲು ಸುಂದರಮಯವಾಗಿದೆ. ಇದರಿಂದ ಸುತ್ತಮುತ್ತಲಿನ ಜನರಲ್ಲಿ ನೀರಿನ ದಾಹ ತೀರಿ ಮಂದಹಾಸ ಮೂಡಿಸಿದೆ ಎಂದು ಬರೆದುಕೊಂಡಿದ್ದಾರೆ. ಕಳೆದ 2008ರಲ್ಲಿ ತಲ್ಲೂರು ಕೆರೆ ಕೋಡಿ ಬಿದ್ದಿತ್ತು. ಇದೀಗ ಸುಮಾರ 14 ವರ್ಷದ ಬಳಿಕ ಮತ್ತೆ ಕೆರೆ ಕೋಡಿ ಬಿದ್ದಿದ್ದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. 96 ಎಕರೆ ವಿಸ್ತೀರ್ಣದಲ್ಲಿರುವ ತಲ್ಲೂರು ಕೆರೆ ಸಂಪೂರ್ಣ ಹೂಳು ತುಂಬಿಕೊಂಡಿತ್ತು. ಹೀಗಾಗಿ 2017ರ ಫೆಬ್ರವರಿ ತಿಂಗಳಲ್ಲಿ ಯಶ್ ದಂಪತಿಗಳು ಹೂಳು ತೆಗೆಯಲು ಚಾಲನೆ ನೀಡಿದ್ದರು. ಇದೀಗ ಕೆರೆ ಕೋಡಿಒಡೆದು ನೀರು ತುಂಬಿದ್ದು ಇದರಿಂದ 10ಕ್ಕೂ ಅಧಿಕ ಗ್ರಾಮದ ರೈತರಿಗೆ ಈ ನೀರಿನ ಉಪಯೋಗವಾಗಲಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now