ವಿಶ್ವ ಲೈಂಗಿಕ ಆರೋಗ್ಯ ದಿನದ ಹಿನ್ನೆಲೆಯಲ್ಲಿ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಸಲಿಂಗ ವಿವಾಹ ಬೆಂಬಲಿಸಿ ಮಾತನಾಡಿದ್ದು ಸದ್ಯ ಈ ವೀಡಿಯೋ ವೈರಲ್ ಆಗಿದೆ.
ಮಾನವ ಸರಪಳಿ ರಚನೆ ಒಳಗೊಂಡ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿಶ್ವ ಲೈಂಗಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿಮಾತನಾಡಿದ ವೆಟ್ರಿಮಾರನ್, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸಲಿಂಗ ವಿವಾಹವನ್ನು ಉಲ್ಲೇಖಿಸಿದರು. ಬಾಂಗ್ಲಾದೇಶದ ಮಹಿಳೆ ಮತ್ತು ತಮಿಳುನಾಡಿನ ಮಹಿಳೆಯ ನಡುವೆ ನಡೆದ ಮದುವೆ ಪ್ರಸ್ತಾಪಿಸಿ ಇಂಥ ವಿವಾಹಗಳನ್ನು ಪ್ರೋತ್ಸಾಹಿಸಬೇಕು ಎಂದರು.
ತಮಿಳುನಾಡಿನ ಸುಭಿಕ್ಷಾ ಸುಬ್ರಮಣಿ ತಮ್ಮ ಪ್ರೀತಿಯ ಟೀನಾ ದಾಸ್ ಅವರನ್ನು ಸಾಂಪ್ರದಾಯಿಕ ತಮಿಳು ವಿವಾಹಶೈಲಿಯಲ್ಲಿ ವಿವಾಹವಾದರು. ಟೀನಾ ಬಾಂಗ್ಲಾದೇಶದ ಸಂಪ್ರದಾಯವಾದಿ ಹಿಂದೂ ಕುಟುಂಬದಿಂದ ಬಂದವರಾಗಿದ್ದು ಸುಬಿಕ್ಷಾ ಕೆನಡಾದಲ್ಲಿ ನೆಲೆಸಿರುವ ತಮಿಳು ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇಬ್ಬರೂ ಕೆನಡಾದ ಕ್ಯಾಲ್ಗರಿಯಲ್ಲಿ ನೆಲೆಸಿದ್ದು ಅವರ ಮದುವೆ ಅದ್ಧೂರಿಯಾಗಿ ನೆರವೇರಿರುವುದು ಸಂತಸ ತಂದಿದೆ ಎಂದು ವೆಟ್ರಿಮಾರನ್ ಹೇಳಿದ್ದಾರೆ.

ಸಲಿಂಗ ವಿವಾಹಗಳನ್ನು ಸ್ವಾಗತಿಸುತ್ತೇನೆ ಮತ್ತು ಬೆಂಬಲಿಸುತ್ತೇನೆ. ಇಂಥವರನ್ನು ಹಾಗೂ ತೃತೀಯ ಲಿಂಗದ ವ್ಯಕ್ತಿಗಳನ್ನು ಗೌರವದಿಂದ ಕಾಣಬೇಕು ಪ್ರತಿಯೊಬ್ಬರೂ ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು ಎಂದರು.