• January 1, 2026

ಸುಧಾ ಕೊಂಗರ ಸಿನಿಮಾಗೆ ಮತ್ತೊಬ್ಬ ಸ್ಟಾರ್ ನಟನ ಹೆಸರು

ವಿಜಯ್ ಕಿರಗಂದೂರು ಒಡೆತನದ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ಪರಭಾಷೆಯ ಸಿನಿಮಾಗಳಿಗೆ ಬಂಡವಾಳ ಹೂಡುತ್ತಿರುವ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆಯಾಗಿತ್ತು. ಸೂರ್ಯ ನಟನೆಯ ‘ಸುರರೈ ಪೋಟ್ರು’ ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೇ ನಿರ್ದೆಶಕಿ ಸುಧಾ ಕೊಂಗರ ಜೊತೆ ಸಿನಿಮಾ ಮಾಡುವುದಾಗಿ ಹೊಂಬಾಳೆ ಸಂಸ್ಥೆ ಘೋಷಿಸಿತ್ತು. ಆದರೆ ನಟ ಯಾರು ಅನ್ನೋದನ್ನು ಮಾತ್ರ ಕನ್ಪಾರ್ಮ್ ಮಾಡಿರಲಿಲ್ಲ. ಇದೀಗ ಈ ಕುರಿತಾಗಿ ಚರ್ಚೆ ಶುರುವಾಗಿದೆ. ಇತ್ತೀಚೆಗೆ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ರೆಡಿಯಾದ ಕಾಂತಾರ ಸಿನಿಮಾವನ್ನು ನೋಡಿ ತಮಿಳು ನಟ ಸಿಂಬು ಮೆಚ್ಚಿಕೊಂಡಿದ್ದರು. ಕೇಕ್ ಕತ್ತರಿಸಿ ಸಂಭ್ರಮಾಚರಣೆ ನಡೆಸಿ ಹೊಂಬಾಳೆ ಸಂಸ್ಥೆಗೆ ಶುಭ ಹಾರೈಸಿದ್ದರು. ಹಾಗಾಗಿ ಹೊಂಬಾಳೆ ಹಾಗೂ ಸುಧಾ ಕೊಂಗರ ಚಿತ್ರಕ್ಕೆ ಹೀರೊ ಆಗಿ ಸಿಂಬು ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ. ವಿಭಿನ್ನ ಸಿನಿಮಾಗಳ ಮೂಲಕ ಕಾಲಿವುಡ್ ನಲ್ಲಿ ಸಿಂಬು ಹೆಸರು ಮಾಡಿದ್ದಾರೆ. ಈ ವರ್ಷ ಸಿಂಬು ನಟನೆಯ ಮಹಾ ಹಾಗೂ ವೇಂದು ತನಿದಾತ್ತು ಕಾಡು ಸಿನಿಮಾಗಳು ತೆರೆಕಂಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಕನ್ನಡದ ‘ಮಫ್ತಿ’ ಸಿನಿಮಾ ತಮಿಳು ರೀಮೆಕ್‌ನಲ್ಲೂ ಸಿಂಬು ನಟಿಸ್ತಿದ್ದು, ಇದೀಗ ಸುಧಾ ಕೊಂಗರ ನಿರ್ದೇಶನದ, ಹೊಂಬಾಳೆ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾಗೆ ಸಿಂಬು ನಾಯಕ ಎಂಬ ಗುಸುಗುಸು ಶುರುವಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now