ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
‘ರೆಡ್ ಕಾಲರ್’ ಮೂಲಕ ಬಾಲಿವುಡ್ ಗೆ ಹೊರಟ ಬಹುಭಾಷಾ ನಟ ಕಿಶೋರ್
ಸಂಗೀತ ಸಂಯೋಜಕ ಧರ್ಮೇಂದ್ರ (ಧರ್ಮ ವಿಶ್) ಬರೆದ ಕಥೆಗೆ ಚಂದ್ರಶೇಖರ್ ಬಂಡಿಯಪ್ಪ ಆಕ್ಷನ್ ಕಟ್ ಹೇಳ್ತಿದ್ದಾರೆ. ರಥಾವರ ಚಿತ್ರಕ್ಕೆ ಸಂಗೀತ ನೀಡಿದ್ದ ಧರ್ಮ ವಿಶ್ ಈ ಹಿಂದೆ ಎ ಆರ್ ರೆಹಮಾನ್ ಜೊತೆ ಕೆಲಸ ಮಾಡಿದ್ದಾರೆ.
ರೆಡ್ ಕಾಲರ್ ಒಂದು ಸಾಮೂಹಿಕ ಪ್ರಯತ್ನವಾಗಿದ್ದು, ಇಲ್ಲಿ ಸ್ನೇಹಿತರು ನಿರ್ಮಾಪಕರಾಗಿ ಒಗ್ಗೂಡಿದ್ದಾರೆ. ತಂಡದ ಬಹುಪಾಲು ಪಾತ್ರದಲ್ಲಿ ಬೆಂಗಳೂರಿನ ಜನರೇ ಇದ್ದಾರೆ ಜೊತೆಗೆ ದೇಶದ ಇತರ ಭಾಗಗಳಿಂದ ಬರುವ ಕಲಾವಿದರೂ ರೆಡ್ ಕಾಲರ್ ನ ಭಾಗವಾಗಿದ್ದಾರೆ.
