• March 14, 2026

ಸೋನು ಗೌಡಗೆ ಖಡಕ್ ಎಚ್ಚರಿಕೆ ನೀಡಿದ ಸುದೀಪ್: ಕಣ್ಣೀರಿಟ್ಟ ಸೋಷಿಯಲ್ ಮೀಡಿಯಾ ಸ್ಟಾರ್

ಬಿಗ್ ಬಾಸ್ ಮನೆಗೆ ಎಂಟ್ರಿಕೊಡೋದು ಅಷ್ಟು ಸುಲಭವಲ್ಲ. ಅಲ್ಲಿ ಹೋದ ಮೇಲೆ ಅಲ್ಲಿನ ಆಟ ಆಡಿ ಗೆಲ್ಲುವುದು ಕೂಡ ಅಷ್ಟು ಸುಲಭವಲ್ಲ. ಸ್ಪರ್ಧಿಗಳ ಮೇಲೆ 24 ಗಂಟೆಯೂ ಕ್ಯಾಮೆರಾ ಹದ್ದಿನ ಕಣ್ಣೀರುತ್ತದೆ. ಅಂತೆಯೇ ಸೋನು ಗೌಡರ ನಡವಳಿಕೆಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಇದಕ್ಕೆ ಕಿಚ್ಚ ಸುದೀಪ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ದಿನದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗ್ತಿದ್ದಾರೆ. ಸಾಮಾನ್ಯವಾಗಿ ಬಿಗ್ ಬಾಸ್ ವಿರುದ್ಧವಾಗಿ ಮನೆಯ ಯಾವ ಸದಸ್ಯರು ಮಾತನಾಡುವುದಿಲ್ಲ. ಆದರೆ ಸೋನು ಗೌಡ ಮಾತ್ರ ಪದೇ ಪದೇ ಬಿಗ್ ಬಾಸ್ ಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಆದರೆ ಈ ಭಾರಿ ಸುದೀಪ್ ಸೋನು ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬಿಗ್ ಬಾಸ್ ಕಡೆಯಿಂದ ಬರುವ ಆದೇಶವನ್ಉ ಸ್ಪರ್ಧಿಗಳು ಪಾಲಿಸಬೇಕು. ಆದರೆ ಅದನ್ನು ಸೋನು ಗೌಡ ಗಂಭೀರವಾಗಿ ಪರಿಗಣಿಸಿಲ್ಲ. ಜೊತೆಗೆ ಬಿಗ್ ಬಾಸ್ ಗೆ ಅವಾಜ್ ಹಾಕಿರುವುದನ್ನು ಸುದೀಪ್ ಖಂಡಿಸಿದ್ದಾರೆ. ‘ನಿಮ್ಮ ಮಾತುಗಳು ಕ್ಯೂಟ್​ ಆಗಿ ಇರಲಿಲ್ಲ. ಬಿಗ್​ ಬಾಸ್​ಗೆ ಅವಮಾನ ಮಾಡುವ ರೀತಿಯಲ್ಲಿ ಇತ್ತು. ಇನ್ನು ಮುಂದೆ ನಿಮಗೆ ಬಿಗ್​ ಬಾಸ್​ ಆದೇಶವೇ ನೀಡುವುದಿಲ್ಲ ಎಂದುಕೊಳ್ಳಿ’ ಅಂತ ಸುದೀಪ್​ ಎಚ್ಚರಿಕೆ ನೀಡಿದ್ದಾರೆ. ಸೋನು ಗೌಡರಿಗೆ ಅಡುಗೆ ಮಾಡಲು ಬರುತ್ತದೆ. ಆದ್ರೆ ಸೋನು ಮಾತ್ರ ಇದರಿಂದ ತಪ್ಪಿಸಿಕೊಂಡಿದ್ದಾರೆ. ಜೊತೆಗೆ ಮನೆ ಗುಡಿಸಿ ಗುಡಿಸಿ ಕೈ ನೋವು ಬಂದಿದ್ದೆ ಎಂದಿದ್ದಾರೆ. ಇದನ್ನೆಲ್ಲಾ ಗಮನಿಸಿದ ಸುದೀಪ್ ಸೋನು ಗೌಡಗೆ ಎಚ್ಚರಿಕೆ ನೀಡಿದ್ದಾರೆ.ಇನ್ನಾದರೂ ಸೋನು ಗೌಡ ಬದಲಾಗುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now