• January 1, 2026

ಸರ್ಕಾರಿ ಶಾಲೆಯಲ್ಲೇ ವಿಕ್ರಾಂತ್ ರೋಣ ಪೈರಸಿ: ಕ್ಷಮೆ ಯಾಚಿಸುವಂತೆ ಸುದೀಪ್ ಅಭಿಮಾನಿಗಳ ಪಟ್ಟು

 ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಜುಲೈ 28ಕ್ಕೆ ಬಿಡುಗಡೆಯಾಗಿ ಎಲ್ಲೆಡೆ ಅದ್ದೂರಿ ಪ್ರದರ್ಶನವಾಗುತ್ತಿದೆ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಕಲೆಕ್ಷನ್ ನಲ್ಲೂ ಕಮಾಲ್ ಮಾಡುತ್ತಿದ್ದು ಚಿತ್ರಕ್ಕೆ ಕನ್ನಡದ ಜೊತೆಗೆ ಪರಭಾಷೆಯಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. 100ಕೋಟಿ ಕ್ಲಬ್ ಸನಿಹದಲ್ಲಿರೋ ವಿಕ್ರಾಂತ್ ರೋಣನಿಗೆ ಪೈರಸಿ ಕಾಟ ಶುರುವಾಗಿದ್ದು ಸಿನಿಮಾವನ್ನು ಸರ್ಕಾರಿ ಶಾಲೆಯಲ್ಲಿ ತೋರಿಸಲಾಗಿದೆ. ಮುಳಬಾಗಿಲು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ವಿಕ್ರಾಂತ್ ರೋಣ ಪೈರಸಿ ಕಾಪಿಯನ್ನು ತೋರಿಸಲಾಗಿದೆ. ವಸತಿ ಶಾಲೆಯ ಮಕ್ಕಳಿಗೆ ಅಲ್ಲಿನ ಶಾಲಾ ಸಿಬ್ಬಂದಿಯೇ ಪೈರಸಿ ಸಿನಿಮಾ ತೋರಿಸಿದ್ದು ಮಕ್ಕಳು ಚಿತ್ರ ವೀಕ್ಷಿಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ವಿಷಯ ತಿಳಿದ ಸುದೀಪ್ ಅಭಿಮಾನಿಗಳು ಶಾಲಾ ಸಿಬ್ಬಂದಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ತಪ್ಪು ಮಾಡಿದರುವ ವಿಡಿಯೋ ಮೂಲಕ ಕ್ಷಮೆ ಕೇಳಬೇಕು, ಇಲ್ಲವಾದರೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆ ಎದುರಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಮೊದಲ ದಿನವೇ ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ಚಿತ್ರವು 2500 ಸ್ಕ್ರೀನ್‌ಗಳಲ್ಲಿ 9500ಕ್ಕೂ ಅಧಿಕ ಶೋಗಳು ನಡೆದಿತ್ತು. ಜೊತೆಗೆ 3Dಯಲ್ಲೂ ಪ್ರಪಂಚದಾದ್ಯಂತ 1600ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ ತೆರೆಕಂಡಿದೆ. ಇದರ ನಡುವೆ ಭಾರತದಲ್ಲಿ ಕನ್ನಡ ಮಲ್ಟಿಫ್ಲೆಕ್ಸ್ ಶೋಗಳ ಸಂಖ್ಯೆಯಲ್ಲಿ ವಿಕ್ರಾಂತ್ ರೋಣ ಸಿನಿಮಾವು ಕೆಜಿಎಫ್-2 ದಾಖಲೆಯನ್ನು ಮುರಿದಿದೆ. ಈ ಹಿಂದೆಯೂ ಸುದೀಪ್ ನಟನೆಯ ಫೈಲ್ವಾನ ಚಿತ್ರಕ್ಕೂ ಪೈರಸಿ ಕಾಟ ಉಂಟಾಗಿದ್ದು ಇದಕ್ಕೆ ದೊಟ್ಟ ನಷ್ಟ ಅನುಭವಿಸುವಂತಾಗಿತ್ತು. ಹೀಗಾಗಿ ವಿಕ್ರಾಂತ್ ರೋಣ ಸಿನಿಮಾ ತಂಡ ಸಾಕಷ್ಟು ಮುಂಜಾಗೃತಾ ಕ್ರಮ ಕೈಗೊಂಡಿದ್ದರು ಮತ್ತೆ ಪೈರಸಿ ಆಗಿದ್ದು ಚಿತ್ರತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now