• January 1, 2026

ಉಪೇಂದ್ರ ಬರ್ತಡೇಗೆ ಬಿಡುಗಡೆ ಆಗುತ್ತಿರುವ ‘ಕಬ್ಜ’ ಟೀಸರ್ ಗಾಗಿ ಕಾದು ಕೂತ ಕಿಚ್ಚ ಸುದೀಪ್

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು ಉಪೇಂದ್ರ ಹಾಗೂ ಕಿಚ್ಚ ಸುದೀಪ್ ನಟನೆಯ ಕಬ್ಜ ಸಿನಿಮಾ.  ನಾಳೆ (ಸೆ.17)ರಂದು ಸಿನಿಮಾದ ಟೀಸರ್ ಬಿಡುಗಡೆ ಆಗಲಿದ್ದು ಅದಕ್ಕಾಗಿ ಅಭಿಮಾನಿಗಳ ಜೊತೆ ಸ್ವತಃ ನಟ ಕಿಚ್ಚ ಸುದೀಪ್ ಕಾದು ಕೂತಿದ್ದಾರಂತೆ. ಜೊತೆಗೆ ಅಭಿಮಾನಿಗಳಿಗೂ ಕಡ್ಡಾಯವಾಗಿ ಸಿನಿಮಾದ ಟೀಸರ್ ನೋಡಿ ಎಂದು ವಿಡಿಯೋ ಮೂಲಕ ಕೇಳಿಕೊಂಡಿದ್ದಾರೆ. ಕಬ್ಜ ಸಿನಿಮಾದ ಟೀಸರ್ ಉಪೇಂದ್ರರ ಹುಟ್ಟು ಹಬ್ಬದ ದಿನಕ್ಕಾಗಿ ಬಿಡುಗಡೆ ಆಗುತ್ತಿದ್ದು, ಟೀಸರ್ ನೋಡಲು ನಾನಂತೂ ಎಕ್ಸೈಟ್ ಆಗಿದ್ದೇನೆ. ಎಲ್ಲರೂ ಈ ಸಿನಿಮಾಗೆ ಪ್ರೋತ್ಸಾಹಿಸಿ ಎಂದು ಸುದೀಪ್ ವಿಡಿಯೋ ಸಂದೇಶ ಕಳುಹಿಸಿದ್ದಾರೆ. ಈ ಹಿಂದೆ ಸುದೀಪ್ ಹಾಗೂ ಉಪೇಂದ್ರ ಜೋಡಿಯಾಗಿ ಮುಕುಂದಾ ಮುರಾರಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ರು. ಆ ಬಳಿಕ 6 ವರ್ಷಗಳ ನಂತ್ರ ಮತ್ತೆ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದು ಈ ಇಬ್ಬರು ಸ್ಟಾರ್ ಗಳನ್ನು ಮತ್ತೆ ಒಟ್ಟಿಗೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾದು ಕೂತಿದ್ದಾರೆ. ಇದುವರೆಗೂ ಕೇವಲ ಚಿತ್ರದ ಚಿತ್ರದ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದ್ದ ನಿರ್ದೇಶಕ ಆರ್ ಚಂದ್ರು ಇದೀಗ ಚಿತ್ರದ ಟೀಸರ್ ರಿಲೀಸ್ ಮಾಡುತ್ತಿದ್ದು ಟೀಸರ್ ನೋಡಲು ಅಭಿಮಾನಿಗಳು ಕಾದು ಕೂತಿದ್ದಾರೆ. ಕೆಜಿಎಫ್ 2 ಸಿನಿಮಾದ ನಂತರ ಭಾರೀ ಬಜೆಟ್ ನಲ್ಲಿ ನಿರ್ಮಾಣ ಆಗಿರುವ ಮತ್ತೊಂದು ಕನ್ನಡ ಸಿನಿಮಾ ಇದಾಗಿದ್ದು, ಪ್ಯಾನ್ ಇಂಡಿಯಾ ಲೇವಲ್ ನಲ್ಲೇ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ನಾಳೆ ಬಿಡುಗಡೆ ಆಗುತ್ತಿರುವ ಟೀಸರ್ ಒಟ್ಟು ಐದು ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಇದೇ ಮೊದಲ ಭಾರಿಗೆ ಉಪೇಂದ್ರ, ಸುದೀಪ್ ಹಾಗೂ ಆರ್ ಚಂದ್ರು ಒಟ್ಟಿಗೆ ಕೆಲಸ ಮಾಡುತ್ತಿದ್ದು, ಕೆಜಿಎಫ್ ಸಿನಿಮಾದಲ್ಲಿ ಕೆಲಸ ಮಾಡಿದ್ದು ತಾಂತ್ರಿಕ ತಂಡ ಇಲ್ಲೂ ಕೆಲಸ ಮಾಡಲಿದೆ. ಒಟ್ನಲ್ಲಿ ಈಗಾಗ್ಲೆ ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸದ್ದು ಮಾಡುತ್ತಿದ್ದು ಟೀಸರ್ ಗಾಗಿ ಪರಭಾಷೆಯ ಮಂದಿಯೂ ಕಾದು ಕೂತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now