• January 1, 2026

ಕನ್ನಡದ ಮಾಣಿಕ್ಯನಿಗೆ ಬರ್ತಡೇ ಸಂಭ್ರಮ: ಅಭಿಮಾನಿಗಳಿಗೆ ಕೈ ಮುಗಿದ ಧನ್ಯವಾದ ಹೇಳಿದ ಸುದೀಪ್

ಇಂದು ನಟ ಕಿಚ್ಚ ಸುದೀಪ್ ಗೆ ಬರ್ತಡೇ ಸಂಭ್ರಮ.ಕನ್ನಡದ ಜೊತೆಗೆ ಪರಭಾಷೆಯಲ್ಲೂ ಮಿಂಚುತ್ತಿರುವ ಮಾಣಿಕ್ಯನಿಗೆ ಕೋಟ್ಯಾಂತರ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಸಿನಿಮಾ ರಂಗದ ಕಲಾವಿದರು, ಅಭಿಮಾಣಿಗಳು ಸೇರಿದಂತೆ ಸಾಕಷ್ಟು ಮಂದಿ ಸೋಷಿಯಲ್ ಮೀಡಿಯಾ ಮೂಲಕ ಸುದೀಪ್ ಗೆ ಶುಭ ಹಾರೈಸಿದ್ದಾರೆ. ಸುದೀಪ್ ಬರ್ತಡೇ ಹಿನ್ನೆಲೆಯಲ್ಲಿ ಪುಟ್ಟೇನಹಳ್ಳಿಯಲ್ಲಿರುವ ಸುದೀಪ್ ಮನೆ ಮುಂದೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಸುದೀಪ್ ಮನೆ ಮುಂದೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಮನೆ ಬಳಿ ಬಂದು ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಅಭಿಮಾನಿಗಳನ್ನು ನೋಡಿ ಸುದೀಪ್ ಮೂಕ ವಿಸ್ಮಿತರಾದರು. ಈ ವೇಳೆ ಮನೆಯಿಂದ ಹೊರ ಬಂದ ಸುದೀಪ್ ಕೈ ಮುಗಿದು ಧನ್ಯವಾದ ಹೇಳಿದರು. ಸುದೀಪ್ ಮನೆಯಿಂದ ಹೊರ ಬರುತ್ತಿದ್ದಂತೆ ಸಂಭ್ರಮಿಸಿದ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸುದೀಪ್ ಬರ್ತಡೇ ಹಿನ್ನೆಲೆಯಲ್ಲಿ ಸಾಕಷ್ಟು ಅಭಿಮಾನಿಗಳು ಆಗಮಿಸುವ ಕಾರಣಕ್ಕೆ ಮನೆ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಜೊತೆಗೆ ವಿಕ್ರಾಂತ್ ರೋಣ ಸಿನಿಮಾದ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಅಲ್ಲದೆ ಸುದೀಪ್ ಬರ್ತಡೇ ಹಿನ್ನೆಲೆಯಲ್ಲಿ ಸಾಕಷ್ಟು ಸ್ಥಳಗಳಲ್ಲಿ ಸುದೀಪ್ ಕಟೌಟ್ ಹಾಗೂ ಫೋಟೋಗಳನ್ನು ಹಾಕಿ ಬರ್ತಡೇ ಆಚರಿಸಲಾಯಿತು. ಅಲ್ಲದೆ ರಕ್ತದಾನ, ನೇತ್ರದಾನ ಹಾಗೂ ಅನ್ನ ದಾನ ಸೇರಿದಂತೆ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಅಭಿಮಾನಿಗಳು ಮಾಡಿದರು. ಸೋಶಿಯಲ್ ಮೀಡಿಯಾದಲ್ಲಿ ಸುದೀಪ್​ಗೆ ಬರ್ತ್​ಡೇ ವಿಶ್ ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಸುದೀಪ್​ ಜನ್ಮದಿನಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ. ಸುದೀಪ್ ನಟಿಸುತ್ತಿರುವ ‘ಕಬ್ಜ’ ಚಿತ್ರದ ಹೊಸ ಪೋಸ್ಟರ್ ಸುದೀಪ್ ಬರ್ತಡೇ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now