• March 14, 2026

49ರ ಹರೆಯದಲ್ಲೂ ಚಿರ ಯುವಕರು ನಾಚುವಂತಿದೆ ಸುದೀಪ್ ಫಿಟ್ ನೆಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಲಕ್ಷಾಂತರ ಹುಡುಗಿಯರ ಮನಸ್ಸು ಕದ್ದಿರೋ ಸುದೀಪ್ ಇಂದು 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸುದೀಪ್ ಗೆ  49 ವರ್ಷ ಅಂದರೆ ಯಾರು ಕೂಡ ನಂಬಲು ಸಾಧ್ಯವಿಲ್ಲ. ಇಂದಿಗೂ ಚಿರ ಯುವಕನಂತೆ ಕಂಗೊಳಿಸುವ ಸುದೀಪ್ ಸಖತ್ ಫಿಟ್ ಎಂಟ್ ಫೈನ್.ಸುದೀಪ್ ಫಿಟ್ ನೆಸ್ ವಿಚಾರದಲ್ಲಿ ಸಾಕಷ್ಟು ಮಂದಿಗೆ ಮಾದರಿಯಾಗಿದ್ದಾರೆ. 1973ರಲ್ಲಿ ಚಿತ್ರರಂಗಕ್ಕೆ ಬಂದ ಸುದೀಪ್ ಕನ್ನಡೆ ಜೊತೆಗೆ ತೆಲುಗು,ತಮಿಳು ಹಾಗೂ ಹಿಂದಿ ಭಾಷೆಯಲ್ಲೂ ತಮ್ಮದೇ ಆದ ಚಾಪೂ ಮೂಡಿಸಿದ್ದಾರೆ. ಪರಭಾಷೆಯ ಕಲಾವಿದರ ಜೊತೆ ಉತ್ತಮ ಬಾಂದವ್ಯ ಹೊಂದಿರುವ ಸುದೀಪ್ ಅಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಹೀಗಾಗಿ ಪರಭಾಷೆಯ ಕಲಾವಿದರು ಸುದೀಪ್ ಹುಟ್ಟುಹಬ್ಬಕ್ಕೆ ಮನತುಂಬಿ ಶುಭ ಹಾರೈಸಿದ್ದಾರೆ. ಬಾಲ್ಯದಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸುದೀಪ್ ಗೆ ನಟ ಪುನೀತ್ ರಾಜ್ ಕುಮಾರ್ ಜೊತೆ ಉತ್ತಮ ಬಾಂದವ್ಯ ಹೊಂದಿದ್ದರು. ಆದರೆ ಪುನೀತ್ ಅವರನ್ನು ಕಳೆದುಕೊಂಡ ಸುದೀಪ್ ಈ ವರ್ಷದ ಬರ್ತಡೇಯನ್ನು ಸಿಂಪಲ್ ಆಗಿ ಆಚರಿಸಲು ನಿರ್ಧರಿಸಿದ್ದರು. ಆದರೆ ಅವರ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಹಬ್ಬದ ರೀತಿ ಸೆಲೆಬ್ರೇಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಸೂಪರ್ ಹಿಟ್ ಆಗಿತ್ತು. ಸಾಕಷ್ಟು ಅಡೆತಡೆಗಳ ಮಧ್ಯೆ ತೆರೆಗೆ ಬಂದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಸದ್ಯ ಸುದೀಪ್, ಉಪೇಂದ್ರ ನಟನೆಯ ಕಬ್ಜ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸುದೀಪ್ ಬರ್ತಡೇ ಪ್ರಯುಕ್ತ ನಟ ಶಿವರಾಜ್ ಕುಮಾರ್ ಕಾಮನ್​ ಡಿಪಿ ಅನಾವರಣ ಮಾಡಿದ್ದರು. ಸುದೀಪ್ ಅವರು ಲಕ್ಷಾಂತರ ಅಭಿಮಾನಿಗಳ ಜತೆ ನಿಂತಿರುವ ರೀತಿಯಲ್ಲಿ ಈ ಚಿತ್ರ ಮೂಡಿ ಬಂದಿತ್ತು. ಈ ಫೋಟೋವನ್ನು ಪ್ರೊಫೈಲ್ ಪಿಕ್ಚರ್ ಮಾಡಿಕೊಂಡು ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now